ಬೆಂಗಳೂರು: ರಾಜ್ಯ ಸರ್ಕಾರ ಹಾಲಿನ ದರ ಎರಿಸಿದ ಬಳಿಕ ಇದೀಗ ನಂದಿನಿ ಪಾರ್ಲರ್ಗೆ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಬಂದಿದೆ. ನಿನ್ನೆ(ಆ.1) ಹೊಸ ದರದ ಪ್ಯಾಕೆಟ್ ಇರಲಿಲ್ಲ. ಹಳೆಯ ದರದ ಪ್ಯಾಕೆಟ್ ಮಾರಾಟ ಮಾಡ್ತಿದ್ದೀರಾ ಎಂದು ಗ್ರಾಹಕರು ಕಿರಿಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು( ಆ.2) ಬೆಳಗ್ಗಿನಿಂದಲೇ ಹೊಸ ದರದ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ. ಅರ್ಧ ಲೀಟರ್ ಹಾಲಿಗೆ ಹಿಂದೆ 20 ರೂಪಾಯಿ ಇತ್ತು. ಈಗ 22 ರೂಪಾಯಿ ಆಗಿದೆ. ಗ್ರಾಹಕರು 50 ಅಥವಾ 100 ರೂಪಾಯಿ ನೋಟು ಕೊಡುತ್ತಾರೆ. ಇದರಿಂದ ಚಿಲ್ಲರೆ ಕೊಡುವುದು ನಮಗೆ ಸಮಸ್ಯೆಯಾಗಿದೆ ಎಂದು ನಂದಿನಿ ಪಾರ್ಲರ್ ಮಾಲೀಕ ರವೀಶ್ ಹೇಳಿದ್ದಾರೆ.