ಬೆಂಗಳೂರು;- ಸಿಲಿಕಾನ್ ಸಿಟಿ ಬೆಂಗಳೂರಿನ ಮಾಲ್ ಒಂದರಲ್ಲಿ ಕಾಮುಕ ಅಂಕಲ್ ಪುಂಡಾಟ ಮೆರೆದಿದ್ದಾನೆ. ಯುವತಿ ಮೈ ಮುಟ್ಟಿ ಅಸಭ್ಯವಾಗಿ ಅಂಕಲ್ ವರ್ತಿಸಿದ ಘಟನೆ ಜರುಗಿದೆ. ಬೆಂಗಳೂರಿನ ಲೂಲು ಮಾಲ್ನಲ್ಲಿ ನಡೆದಿದೆ. ಅರವತ್ತರ ಆಸುಪಾಸಿನ ಅಂಕಲ್ ನಿಂದ ಹೀನ ಕೃತ್ಯ ನಡೆದಿದೆ. ಯುವತಿಯ ಹಿಂಬದಿ ಬೇಕಂತಲೇ ಕಾಮುಕ ಅಂಕಲ್ ಹಿಡಿದಿದ್ದಾನೆ. ಅಂಕಲ್ ಕಳ್ಳಾಟ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ವಿಡಿಯೋವನ್ನ Xಮೂಲಕ ಬೆಂಗಳೂರು ಪೊಲೀಸ್ರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ