ಕಾರವಾರ: ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು ಬಹಿರಂಗವಾಗಿ ಚರ್ಚೆಗೆ ಬರಲಿ. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ ಎಂದು ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಶಿರಸಿಯ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು (Siddaramaiah) ಬಹಿರಂಗವಾಗಿ ಚರ್ಚೆಗೆ ಬರಲಿ.
ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? 20% ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸಿ ಮಾತನಾಡುತ್ತಾರೆ? 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಆ ಮೂಲಕ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೋದಿ ಅವರನ್ನ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು.
ಕಾಂಗ್ರೆಸ್ ನವರಿಗೆ, ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ ಸಿಂಗ್, ಮೋದಿಯವರನ್ನ ರಾವಣ ಅಂತಾ ಕರೆದರು. ಜಯರಾಂ ರಮೇಶ್ ಭಸ್ಮಾಸೂರ ಅಂತಾ ಕರೆದ್ರು, ಮಣಿಶಂಕರ್ ಅಯ್ಯರ್ ವಿಷ ಸರ್ಪ ಅಂತಾ ಕರೆದ್ರು. ಇನ್ನೂ ಏನ್ರಿ ಹೇಳಿಸಿಕೊಳ್ಳಬೇಕು ನಾವು ಎಂದು ಗರಂ ಆಗಿದ್ದಾರೆ.