ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಕೆಪಿಸಿಸಿ ಕಚೇರಿ ನಮಗೆ ದೇವಸ್ಥಾನ, ಹಾಗಾಗಿ ಬರುತ್ತೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಗೃಹ ಜ್ಯೋತಿ ವೆಬ್ ಸೈಟ್ ತಾಂತ್ರಿಕ ಸಮಸ್ಯೆ ಸರಿ ಮಾಡಿದ್ದೇವೆ. ವೆಬ್ ಸೈಟ್ ಕ್ರ್ಯಾಶ್ ಬಗ್ಗೆ ಗೊತ್ತಾಗಿದೆ. ಸರ್ವರ್ ಸಾಮರ್ಥ್ಯ ಜಾಸ್ತಿ ಮಾಡಿದ್ದೇವೆ. 10 ಲಕ್ಷ ಅರ್ಜಿ ಸ್ವೀಕಾರ ಸಾಮರ್ಥ್ಯ ಸರ್ವರ್ ಇದೆ ಎಂದರು. ಬಿಜೆಪಿ ಕಾಲದ ಹಗರಣಗಳ ತನಿಖೆ ವಿಚಾರವಾಗಿ ಮಾತನಾಡಿದ ಅವರು, ದೂರು ಇನ್ನೂ ಬಂದಿಲ್ಲ, ಬಂದರೆ ತನಿಖೆ ಮಾಡುತ್ತೇವೆ. ಇಲಾಖೆಯ ಪರಿಶೀಲನೆ ಸಭೆಯಲ್ಲಿ ಒಂದು ಹಗರಣದ ಬಗ್ಗೆ ಗೊತ್ತಾಗಿದೆ. ಅದನ್ನು ತನಿಖೆ ಮಾಡಲು ಎಸಿಎಸ್ಗೆ ನೀಡಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶವ ಗೊತ್ತಾಗಲಿದೆ ಎಂದರು.