ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯಿಂದ 28ಕ್ಕೆ 28ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದೆ, ಸಂಸದ ಜಿಎಂ ಸಿದ್ದೇಶ್ವರ್ ದಾವಣಗೆರೆ ಮಾತ್ರವಲ್ಲದೇ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ, ಈ ಹಿನ್ನಲೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದು ಪರೋಕ್ಷವಾಗಿ ಸಿದ್ದೇಶ್ವರ್ ರನ್ನ ಗೆಲ್ಲಿಸಿ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು ವಿರೋಧಿ ಬಣಕ್ಕೆ ಶಾಕ್ ನೀಡಿ.
ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನೂತನ ಜಿಲ್ಲಾಧ್ಯಕ್ಷ ರಾಜಶೇಖರ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಬಿಎಸ್ ವೈ, ಸಂಸದ ಜಿಎಂ ಸಿದ್ದೇಶ್ವರ್ ಈ ಸಮಾರಂಭಕ್ಕೆ ಗೈರಾಗಿದ್ದಾರೆ ಎಂದು ತಪ್ಪು ತಿಳಿಯಬೇಡಿ, ಅವರು ದೆಹಲಿ ಸಂಸತ್ ಸಭೆಯಲ್ಲಿದ್ದಾರೆ, ಜಿಲ್ಲೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸಬೇಕು, ಸಿದ್ದೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ, ಸಿದ್ದೇಶ್ವರ್ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿ ಬಂದಿದ್ದೇನೆ, ದೆಹಲಿಯಲ್ಲಿ ಇರುವ ಕಾರಣ ಗೈರಾಗಿದ್ದಾರೆ, ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರದಾನಿ ಅನ್ನೋ ಮಾತು ಎಲ್ಲೆಲ್ಲೂ ಕೇಳಿ ಬರುತ್ತಾ ಇದೆ, ಬರುವ ದಿನಗಳಲ್ಲಿ ಮತ್ತೆ ಬಿಜೆಪಿಯನ್ನ ಗೆಲ್ಲಿಸಿ ಎಂದು ಕರೆ ನೀಡಿದರು..
ಬೆಂಗಳೂರಿಗೆ ಹೋಗಬೇಕಿತ್ತು, ಆದರೆ ಮಾತು ಕೊಟ್ಟಂತೆ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಮುಂಬರುವ ಲೋಕಸಭಾ ಚುನಾವಣೆ ಸವಾಲು ಎದುರಿಸಬೇಕಿದೆ, ಹಿಂದಿನ ಕೇಂದ್ರ ಸರ್ಕಾರದ ಭ್ರಷ್ಟಾಚಾರಕ್ಕೆ ಬೇಸತ್ತು ಮೋದಿಯವರನ್ನ ಜನ ಆಯ್ಕೆ ಮಾಡಿದ್ದಾರೆ, ಇಲ್ಲಿ ರಾಜ್ಯ ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ, ಗ್ಯಾರಂಟಿ ಸಮರ್ಪಕವಾಗಿ ಮಾಡಲು ಆಗುತ್ತಿಲ್ಲ, ಇತ್ತ ಅಭಿವೃದ್ದಿಯೂ ಆಗ್ತಿಲ್ಲ,
ಎಲ್ಲದಕ್ಕೂ ಕೇಂದ್ರದ ಕಡೇ ಬೆಟ್ಟು ಮಾಡುತ್ತಾರೆ, ದೆಹಲಿಗೆ ಹೋಗಿ ತಮ್ಮ ಮರ್ಯಾದೆ ಕಳೆದುಕೊಂಡಿದ್ದಾರೆ, ದೇಶದ ಮುಂದೇ ತಾವೇ ಬಂಡವಾಳ ಬಯಲು ಮಾಡಿಕೊಂಡು ಬಂದಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ದೇಶ ಹೊಡೆಯುವ ಮಾತು ಹೇಳಿದ್ದಾರೆ, ಜನರ ದುಡ್ಡಿನಲ್ಲಿ ಜಾಹಿರಾತು ನೀಡಿ ಮರ್ಯಾದೆ ಕಳೆದುಕೊಂಡಿದ್ದಾರೆ, ರಾಜ್ಯಕ್ಕೆ ಬಂದ ಹಣದ ಕುರಿತು ಲೆಕ್ಕ ಕೊಡಲಾಗಿದೆ, ದೆಹಲಿಗೆ ಹೋಗಿ ರಾಜ್ಯದ ಮರ್ಯಾದೆ ಕಳೆದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಎಸ್ ವೈ ಗುಡುಗಿದ್ದಾರೆ.