Yash19 ಟೈಟಲ್ ರಿವೀಲ್, ಅಭಿಮಾನಿಗಳಿಗೆ ಹೆಚ್ಚಿದ ಸಂಭ್ರಮ

Yash19 ಟೈಟಲ್ ರಿವೀಲ್, ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದೆ. ಯಶ್ ಅವರ ಸಿನಿಮಾದ ಅಪ್ಡೇಟ್​ಗಾಗಿ ಕಾಯುತ್ತಿದ್ದ ಜನರಿಗೆ ಸೂಪರ್ ಆಗಿರುವ ಟೀಸರ್ ಸಿಕ್ಕಿದೆ.

ಯಶ್ ಅವರ ಟಾಕ್ಸಿಕ್ ಸಿನಿಮಾ 10-4-2025 ರಂದು ರಿಲೀಸ್ ಆಗಲಿದೆ. ಸಿನಿಮಾವನ್ನು ಯಶ್ ಅವರು ತುಂಬಾ ತಡವಾಗಿ ಅನೌನ್ಸ್ ಮಾಡಿದ್ದರೂ ಈ ಒಂದು ಹಂತದಲ್ಲಿಯೇ ಸಿನಿಮಾದ ಟೈಟಲ್, ಸಿನಿಮಾದ ಫಸ್ಟ್ ಟೀಸರ್, ಸಿನಿಮಾ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಿರುವುದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಟಾಕ್ಸಿಕ್​ ಟೀಸರ್ ಒಂದು ಜೋಕರ್ ಚಿತ್ರದೊಂದಿಗೆ ಶುರುವಾಗುತ್ತದೆ. ಆ ನಂತರ ಕೆವಿನ್ ಪ್ರೊಡಕ್ಷನ್, ಮಾನ್​​ಸ್ಟರ್ ಕ್ರಿಯೇಷನ್ಸ್ ಲುಕ್ ಸಿಗುತ್ತದೆ. ಆ ನಂತರ ಗೀತು ಮೋಹನ್​ದಾಸ್ ಹೆಸರು ಬರುತ್ತದೆ. ಆಮೇಲೆ ಯಶ್ ಅವರ ಲುಕ್ ಕಾಣಸಿಗುತ್ತದೆ. ಯಶ್ ಕೈಯಲ್ಲಿ ಗನ್ ಹಿಡಿದಿರುವುದನ್ನು ಕಾಣಬಹುದು. ನಂತರ ಯಶ್ ಕ್ಯಾಪ್ ಧರಿಸಿ ಸ್ಮೋಕ್ ಮಾಡುತ್ತಾ ಕಾಣಿಸಿಕೊಳ್ಳಯತ್ತಾರೆ.ಯಶ್ ಸಿನಿಮಾದ ಟೀಸರ್​ನ ಬ್ಯಾಗ್ರೌಂಡ್ ಮ್ಯೂಸಿಕ್ ನಿಜಕ್ಕೂ ಸೂಪರ್ ಆಗಿದೆ.

Loading

Leave a Reply

Your email address will not be published. Required fields are marked *