ಬೆಂಗಳೂರು ವಿವಿ ವಿದ್ಯಾರ್ಥಿಗಳ‌ ಊಟದಲ್ಲಿ ಹುಳು ಪತ್ತೆ..! ವಿವಿ ಅವ್ಯವಸ್ಥೆ ಕುರಿತು ಕವನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಸತಿ ಶಾಲೆಯ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಕಳಪೆ ಆಹಾರ ತಿಂದು ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿದ್ದು, ಊಟದಲ್ಲಿ ಹುಳ ಇದೆ ಎಂದರೆ ಅಡ್ಜೆಸ್ಟ್ ಮಾಡಿ ಎಂಬ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದರಿಂದ ಬೇಸತ್ತ ವಿದ್ಯಾರ್ಥಿಗಳು ಕಟ್ಟುಪಾಡು ಬದಲಾಗದು ಎಂಬ ಶೀರ್ಷಿಕೆಯಡಿ ಕವನ ಬರೆದಿದ್ದು, ಬದಲಿಸಲು ಮುಂದೆ ಬಂದರೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ ಎಂದು ಕವನದಲ್ಲಿ ಉಲ್ಲೇಖಿಸಲಾಗಿದೆ.

ಇದೇ ಹಾಸ್ಟೆಲ್​ನಲ್ಲಿ 2023ರ ನವೆಂಬರ್ ತಿಂಗಳಲ್ಲಿ ಊಟದಲ್ಲಿ ಹುಳಗಳು ಪತ್ತೆಯಾಗಿದ್ದವು. ಕಳಪೆ ಆಹಾರ ನೀಡುತ್ತಿರುವುದರಿಂದ ಕೆರಳಿದ ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಊಟ, ನೀರು ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

Loading

Leave a Reply

Your email address will not be published. Required fields are marked *