ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ಕಾರೊಂದು ಕೆ ಆರ್ ಸರ್ಕಲ್ ನಲ್ಲಿನ ಅಂಡರ್ ಬಾಸ್ ನ ನೀರಿನಲ್ಲಿ ಮುಳುಗಿತ್ತು. ಕಾರಿನಲ್ಲಿದ್ದಂತ ಆರು ಮಂದಿಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡು ಸೆಂಟ್ ಮಾರ್ಥಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂತಹ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬಸ್ಥರಿಗೆ ಐದು ಲಕ್ಷ ಪರಿಹಾರವನ್ನು ಸರ್ಕಾರದಿಂದ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ಮಳೆಯ ನೀರಿನಲ್ಲಿ ಕಾರಿನಲ್ಲಿ ಸಿಲುಕಿ ಮಹಳಿ ಮೃತಪಟ್ಟ ಮಾಹಿತಿ ತಿಳಿದಂತ ಸಿಎಂ ಸಿದ್ಧರಾಮಯ್ಯ, ಕೂಡಲೇ ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರಿಂದ ಮಾಹಿತಿ ಪಡೆದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ವಿಜಯವಾಡದವರು ಗಾಡಿನ ಬಾಡಿಗೆ ಮಾಡಿಕೊಂಡು ಬೆಂಗಳೂರು ನೋಡಲ್ಲು ಬಂದಿದ್ದರು. ಡ್ರೈವರ್ ಸೇರಿ 7 ಮಂದಿ ಇದ್ದರು. ಅಂಡರ್ ಪಾಸ್ ನಲ್ಲಿ ಒಳಗೆ ಹೋದ ತಕ್ಷಣ ಮಳೆಯ ನೀರಿನಿಂದ ಭಾಗಿಲು ಕೂಡ ಓಪನ್ ಆಗಿಲ್ಲ. ಹೀಗಾಗಿ ಭಾನುರೇಖಾ ಎಂಬುವರು ನೀರು ಕುಡಿದು ಅಸ್ವಸ್ಥಗೊಂಡಿದ್ದಾರೆ. ಇಲ್ಲಿಗೆ ಬಂದಾಗ ವೈದ್ಯರು ಪರೀಕ್ಷಿಸಿದ್ದಾರೆ. ಆಕೆ ಇಲ್ಲಿಗೆ ಬರುವಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಸ್ಥಳದಲ್ಲಿದ್ದಂತ ಸಂಚಾರಿ ಪೊಲೀಸರಿ ಮಳೆಯ ಸಂದರ್ಭದಲ್ಲಿ ಕೆ ಆರ್ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದರು.
ಮೃತ ಭಾನುರೇಖಾ ಅವರಿಗೆ ಸರ್ಕಾರದಿಂದ 5 ಲಕ್ಷವನ್ನು ಪರಿಹಾರ ನೀಡಲಾಗುತ್ತದೆ. ಮಳೆಯ ಅವಾಂತರದಲ್ಲಿ ಗಾಯಗೊಂಡಿರುವಂತವರಿಗೆ ರಾಜ್ಯ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂಬುದಾಗಿ ಹೇಳಿದರು.