ಸಿನಿಮಾದಿಂದ ರಾಜಕೀಯದತ್ತ ಮುಖ ಮಾಡ್ತಾರಾ ಡಾಲಿ..?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್. ನಟ, ನಿರ್ಮಾಪಕನಾಗಿ ಜನ ಮೆಚ್ಚುಗೆ ಪಡೆದಿರುವ ಡಾಲಿ ಧನಂಜಯ್‌ ಇದೀಗ ರಾಜಕೀಯಕ್ಕೆ ಧುಮುಕಲಿದ್ದಾರಂತೆ ಎಂಬ ಅಂತೆ ಕಂತೆ ಕೇಳಿಬರುತ್ತಿದೆ. ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ.

ಚುನಾವಣಾ ರಣತಂತ್ರಗಳನ್ನ ಹೆಣೆಯುವಲ್ಲಿ ರಾಜಕೀಯ ಪಕ್ಷಗಳು ತೊಡಗಿವೆ. ಮತಗಳನ್ನು ಸೆಳೆಯುವ ಸ್ಟ್ರಾಟೆಜಿಗಳತ್ತ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿವೆ. ಹೀಗಿರುವಾಗಲೇ, ಕನ್ನಡ ನಟ ಧನಂಜಯ್‌ ಹೆಸರು ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.

ಧನಂಜಯ್‌ ಅವರನ್ನ ಸಂಪರ್ಕ ಮಾಡಿದ್ಯಾ ಕಾಂಗ್ರೆಸ್‌?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ನಟ ಧನಂಜಯ್ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧನಂಜಯ್ ಅವರನ್ನ ಕಾಂಗ್ರೆಸ್ ಮುಖಂಡರು ಸಂಪರ್ಕ ಮಾಡಿದ್ದಾರಂತೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಧನಂಜಯ್ ಅವರ ಜೊತೆಗೆ ಕಾಂಗ್ರೆಸ್‌ ಮುಖಂಡರು ಚರ್ಚೆ ನಡೆಸಿದ್ದಾರಂತೆ.

ಪ್ರತಾಪ್ ಸಿಂಹಗೆ ಎದುರಾಳಿ?

ಧನಂಜಯ್‌ ಅವರ ಜೊತೆಗೆ ಕಾಂಗ್ರೆಸ್ ಮುಖಂಡರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಮುಖಂಡರಿಗೆ ಧನಂಜಯ್‌ ತಿಳಿಸಿದ್ದಾರೆ ಎನ್ನಲಾಗಿದೆ.ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಧನಂಜಯ್‌ ಅವರನ್ನ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಪ್ಲಾನ್‌ ಮಾಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಹಾಗಾದ್ರೆ, ಪ್ರತಾಪ್ ಸಿಂಹ ಎದುರು ಚುನಾವಣಾ ಅಖಾಡಕ್ಕೆ ಧನಂಜಯ್ ಇಳಿಯುತ್ತಾರಾ?

ಕಾಂಗ್ರೆಸ್ ಮಾಸ್ಟರ್ ಪ್ಲಾನ್?

ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿರುವ ಡಾಲಿ ಧನಂಜಯ್ ಅವರಿಗೆ ಸಾಂಸ್ಕೃತಿಕ ನಗರಿಯಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.

ಡಾಲಿ ಧನಂಜಯ್ ಸಾಮಾಜಿಕ ಕಳಕಳಿ ಹೊಂದಿರುವ ನಟ. ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಟ. ಡಾಲಿ ಧನಂಜಯ್ ಬಾಯಿಂದ ಬಂದಿದ್ದ ‘ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ’ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸಾಮಾಜಿಕ ಬದ್ಧತೆ ಹೊಂದಿರುವ ಡಾಲಿ ಧನಂಜಯ್‌ ರಾಜಕೀಯಕ್ಕೆ ಬಂದರೆ ಒಳಿತು ಎಂಬ ಮಾತುಗಳು ಕೇಳಿಬರುತ್ತಿವೆ. ಡಾಲಿ ಧನಂಜಯ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಡಾಲಿ ಧನಂಜಯ್ ಅವರನ್ನ ಕಣಕ್ಕೆ ಇಳಿಸಿದರೆ, ಲಿಂಗಾಯತ ಶಕ್ತಿಯ ಜೊತೆಗೆ ಎಸ್‌ಸಿ, ಕುರುಬ, ಮುಸ್ಲಿಂ ಮತಗಳನ್ನೂ ಸೆಳೆಯಬಹುದು ಎಂಬ ಮಾಸ್ಟರ್‌ ಪ್ಲಾನ್ ಮಾಡಿದ್ಯಂತೆ ಕಾಂಗ್ರೆಸ್‌ ಪಕ್ಷ.

Loading

Leave a Reply

Your email address will not be published. Required fields are marked *