ಬೆಂಗಳೂರು: ಶಿವಮೊಗ್ಗವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ. ಇದನ್ನ ಖಂಡಿಸುತ್ತೇನೆ. ಕೋಮು ಶಕ್ತಿಗಳನ್ನು ರಾಜಕೀಯವಾಗಿ ಬಳಸಿಕೊಂಡು ವಿಭಜನೆ ಮಾಡಲು ಪ್ರಯತ್ನ ನಡೀತಿದೆ. ಇಂತಹ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಕರೆ ನೀಡಿದ್ದಾರೆ. ಶಿವಮೊಗ್ಗದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ಶಿವಮೊಗ್ಗದ ಘಟನೆ ದುರಾದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿಕೊಂಡು ಗಲಭೆ ಉಂಟು ಮಾಡಬೇಕೆಂಬ ಉದ್ದೇಶ ಪೂರ್ವಯೋಜಿತ ಘಟನೆ ಅನ್ನೋದು ಸ್ಪಷ್ಟವಾಗಿದೆ. ಶಿವಮೊಗ್ಗ ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿದೆ. ಇದು ಗೊತ್ತಿದ್ದೂ ಅಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿದವನ ಆರಾಧನೆಗೆ, ಪ್ರತಿಕೃತಿ ಹಾಕುವುದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಯಾಕೆ ಅವಕಾಶ ಕೊಟ್ರು? ಶಿವಮೊಗ್ಗದಲ್ಲಿ ನಡೆದಿದ್ದು ಈದ್ ಮೀಲಾದೋ? ಟಿಪ್ಪು ಜಯಂತಿಯೋ? ಔರಂಗಜೇಬ್ ಜಯಂತಿಯೋ? ಎಂದು ಪ್ರಶ್ನೆ ಮಾಡಿದ್ದಾರೆ.