ಮದುವೆಯಾಗುವ ಹುಡುಗ ಹೇಗಿರಬೇಕು: ಅಭಿಮಾನಿ ಪ್ರಶ್ನೆಗೆ ನಾಚಿ ನೀರಾದ ಸ್ಮೃತಿ ಮಂಧಾನ

ಸ್ಮೃತಿ ಮಂಧನಾ ಎನ್ನುವ ಹೆಸರು ಯಾವ ಕ್ರಿಕೆಟ್ ಅಭಿಮಾನಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ಮುದ್ದಾದ ನಗುವಿನ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಕ್ರಿಕೆಟ್ನಿಂದ ಕೊಂಚ ಬಿಡುವಿನಲ್ಲಿರುವ ಸ್ಮೃತಿ ಮಂಧನಾ, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಜತೆ ಕೌನ್ ಬನೇಗಾ ಕರೋಡ್ಪತಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಟೆಲಿವಿಷನ್ ಕಾರ್ಯಕ್ರಮದಲ್ಲಿ ಸ್ಮೃತಿ ಮಂಧನಾ ಅವರಿಗೆ ಒಂದು ವಿಚಿತ್ರ ಪ್ರಶ್ನೆ ಎದುರಾಯಿತು. ಪ್ರಶ್ನೆಗೆ ಆರ್ಸಿಬಿ ನಾಯಕಿ ಸ್ಮೃತಿ ಮಂಧನಾ ನಗುತ್ತಲೇ ಉತ್ತರ ನೀಡಿದ್ದಾರೆ. ಮೂಲಕ ದೊಡ್ಡ ಕುತೂಹಲವೊಂದಕ್ಕೆ ತೆರೆ ಎಳೆದಿದ್ದಾರೆ. ಕ್ವಿಜ್ ಶೋನಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಮಂಧನಾ ಅವರಿಗೆ, ಸೋಷಿಯಲ್ಮೀಡಿಯಾದಲ್ಲಿ ಸಾಕಷ್ಟು ಯುವ ಭಾರತೀಯರು ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ. ನೀವು ಮದುವೆಯಾಗ ಬಯಸುವ ಹುಡುಗನಲ್ಲಿ ಯಾವ ಗುಣಗಳಿರಬೇಕು ಎಂದು ಬಯಸುತ್ತೀರಾ ಎಂದು ಕೇಳುತ್ತಾರೆ.

ಇದಕ್ಕೆ ನಗುತ್ತಲೇ ಉತ್ತರ ನೀಡಿದ ಮಂಧನಾ, ನಾನಂತೂ ಖಂಡಿತವಾಗಿಯೂ ರೀತಿಯ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. “ನನ್ನ ಪ್ರಕಾರ ಆತ ಒಳ್ಳೆಯ ವ್ಯಕ್ತಿಯಾಗಿರಬೇಕು. ಯಾವಾಗಲೂ ಆತ ನನ್ನನ್ನು ಕೇರ್ ಮಾಡುವಂತಿರಬೇಕು ಮತ್ತು ನನ್ನ ಸ್ಪೋರ್ಟ್ಸ್ಅರ್ಥ ಮಾಡಿಕೊಳ್ಳುವವನಾಗಿರಬೇಕು. ಎರಡು ಪ್ರಮುಖ ಗುಣಗಳನ್ನು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಸ್ಮೃತಿ ಮಂಧನಾ ತಾವು ಕ್ರಿಕೆಟರ್ ಆಗಿ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಬಾಲ್ಯದಿಂದಲೇ ತಮ್ಮ ತಂದೆ ಮಗಳನ್ನು ಕ್ರಿಕೆಟರ್ ಮಾಡಲು ಎಷ್ಟೆಲ್ಲ ಸಪೋರ್ಟ್ ಮಾಡಿದರು ಎನ್ನುವುದನ್ನು ನೆನಪಿಸಿಕೊಂಡರು.

ಸ್ಮೃತಿ ಮಂಧನಾ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಹೀಗಾಗಿ ಮಂಧನಾಗೆ ಕರ್ನಾಟಕದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ ಸ್ಮೃತಿ ಮಂಧನಾ ಇತ್ತೀಚೆಗಷ್ಟೇ ಮುಂಬೈ ವಾಂಖೇಡೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಚೊಚ್ಚಲ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಂಧನಾ ಮಂಧನಾ ಮೊದಲ ಇನಿಂಗ್ಸ್ನಲ್ಲಿ 74 ರನ್ ಸಿಡಿಸಿದ್ದರು

Loading

Leave a Reply

Your email address will not be published. Required fields are marked *