ಹುಬ್ಬಳ್ಳಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥನೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಹೇಳಿಕೆಯನ್ನ ನಾನು ಗಮನಿಸಿದ್ದೇನೆ, ಅವರು ಹೇಳಿರೋದು ಸರಿ ಇದೆ. ಈಶ್ವರಪ್ಪ ಹೇಳಿದ್ರಲ್ಲಿ ಏನೂ ತಪ್ಪಿಲ್ಲ. ಡಿ.ಕೆ.ಸುರೇಶ್ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದರು.
ಈದ್ಗಾ ಮೈದಾನದಲ್ಲಿ ದ್ವಜ ಹಾರಿಸೋ ವೇಳೆ ಇದೇ ಕಾಂಗ್ರೆಸ್ ಇತ್ತು. ಇವರು ಗುಂಡು ಹಾರಿಸಿಲ್ವಾ..? ದೇಶ ವಿಭಜನೆ ಹೇಳಿಕೆ ಅತ್ಯಂತ ಕೆಟ್ಟ ಹೇಳಿಕೆ. ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಸಂಘರ್ಷದಲ್ಲಿ ತೊಡಗಿದೆ. ಡಿ.ಕೆ. ಸುರೇಶ ಅತ್ಯಂತ ಕೆಟ್ಟ ಹೇಳಿಕೆ ಕೊಟ್ಟಿದ್ದಾರೆ. ದೇಶ ಒಡೆಯೋ ಮಾತು ಬರಬಾರದು. ದೇಶ ಒಡೆಯೋ ಮಾತು ಸರಿ ಅಲ್ಲ,
ಇದು ದೇಶದ್ರೋಹಿ ಕೃತ್ಯ. ದೇಶಕ್ಕಾಗಿ ಅನೇಕ ತ್ಯಾಗ ಬಲಿದಾನ ಆಗಿದೆ. ದೇಶ ಒಡಯೋ ಮಾತು ಅಕ್ಷಮ್ಯ ಅಪರಾಧ. ಇಸ್ಲಾಂ ಶಕ್ತಿ,ಕ್ರಿಶ್ಚಿಯನ್ ಶಕ್ತಿ,ಕಾಂಗ್ರೆಸ್ ಪಕ್ಷ ಯಾರೆ ಇರಲಿ ದೇಶ ಒಡೆಯೋಕೆ ಆಗಲ್ಲ. ಗಾಂಧಿ ಅವರ ಹಳೇ ಪ್ಲೇಟ್ ಹಾಕಬೇಡಿ. ಅವರನ್ನ ಕೊಲೆ ಮಾಡಿದವರಿಗೆ ಶಿಕ್ಷೆನೂ ಆಗಿದೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ರು..