ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕಂಬಾರಗಣವಿ ಸೇತುವೆಗೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದಾರೆ. ಸೇತುವೆ ಪರಿಶೀಲನೆ ಬಳಿಕ ಮಾತನಾಡಿದ ಅವರು, ಸೇತುವೆ ಸಮಸ್ಯೆ ನಿವಾರಣೆಗೆ 1.5 ಕೋಟಿ ರೂ. ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ಕೂಡಲೇ ಸೇತುವೆ ಕಾರ್ಯ ಆರಂಭವಾಗುತ್ತೆ. ಹಲವು ಕಡೆ ರಸ್ತೆ ಸಮಸ್ಯೆ ಇದೆ ಅರಣ್ಯದ ಕ್ಲಿಯರೆನ್ಸ್ ಸಿಗ್ತಿಲ್ಲ.
ಹೀಗಾಗಿ ಅರಣ್ಯ ಇಲಾಖೆ ಜೊತೆ ಸಭೆ ಮಾಡಿ ಇತ್ಯರ್ಥ ಮಾಡ್ತೇವೆ. ಅಧಿಕಾರಿಗಳಿಗೆ ಮಳೆ ಕಾಮಗಾರಿ ಬಗ್ಗೆ ಹೇಳಿದ್ದೇನೆ. ಮಳೆಯಿಂದ ಮನೆ ಬಿದ್ದವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಮಳೆ ಕಡಿಮೆ ಆದ ತಕ್ಷಣ ಅಂಗನವಾಡಿ ಸೇರಿ ಎಲ್ಲ ಶಾಲೆಗಳ ದುರಸ್ತಿ ಕಾರ್ಯ ಮಾಡಲಾಗುತ್ತೆ. ಈಗಾಗಲೇ ಈ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.