ಬೆಂಗಳೂರು;- ಯಾವುದೇ ಕಾರಣಕ್ಕಬ ಬಿಜೆಪಿಗೆ ನಾವು ಹೋಗಲ್ಲ. ಈ ಹಿಂದೆ 17 ಮುಠ್ಠಾಳರು ಪಕ್ಷ ಬಿಟ್ಟು ಹೋದಂತೆ, ಈಗ ಯಾರೂ ಬಿಜೆಪಿಗೆ ಹೋಗಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಿಎಂ ಹಾಗೂ ಡಿಸಿಎಂ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡ್ತಿದ್ದಾರೆ. ಏನು ಮಾಡೋಕೆ ಆಗುತ್ತೆ, ಮುಠ್ಠಾಳರಾಗಿ ಹೋಗಿದ್ದೂ ಅವರೇ, ಈಗ ಮತ್ತೆ ಅಧಿಕಾರಕ್ಕಾಗಿ ಬರ್ತಿದ್ದಾರೆ. ಕುಮಾರಸ್ವಾಮಿನೇ ಕರ್ಕೊಂಡಿದ್ದಾರೆ ಅಂದ ಮೇಲೆ ನಾವೇನು ಮಾಡೋಕೆ ಆಗುತ್ತೆ?. ಹಿಂದೆ ಅವರು ಸರ್ಕಾರ ಹಾಳು ಮಾಡಿಯೇ ಹೋಗಿದ್ದರು. ಕರ್ಕೊಳ್ಳೋದು ಬಿಡೋದು ಪಕ್ಷದ ಹಿರಿಯರಿಗೆ ಬಿಟ್ಟಿದ್ದು” ಎಂದು ಕಿಡಿಕಾರಿದರ
ರಾಜಕೀಯದಲ್ಲಿ ಡಿಕೆಶಿ ಮುಂದೆ ಬರಬಾರದು ಅಂತ ಮಾಡಿದ್ದಾರೆ. ನಾವು ಗಟ್ಟಿಯಾಗಿ ಇದ್ದೇವೆ. ಎಷ್ಟೇ ಆಮಿಷ ಒಡ್ಡಿದರೂ ಕೂಡ ನಾವು ಎಲ್ಲೂ ಹೋಗಲ್ಲ. ಹಿಂದೆ ಬಿಎಸ್ವೈ ಮಕ್ಕಳು ಸೇರಿಕೊಂಡು ದುಡ್ಡು ಮಾಡಿದ್ದರು” ಎಂದರು.