ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ – ಸಿಎಂ ಬೊಮ್ಮಾಯಿ‌

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ( Prime Minister Narendra Modi ) ಪ್ರಚಾರದಿಂದ ನಮಗೆ ಪ್ಲಸ್ ಆಗಿದೆ. ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ( Chief Minister Basavaraj Bommai ) ಹೇಳಿದರು.

 

ಇಂದು ಹುಬ್ಬಳ್ಳಿಯ ಅವರ ಮನೆಯ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರರುಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತರ, ಅಪ್ರಚಾರ ಮಾಡಿದರು. ಆದರೆ ಅದು ನಿನ್ನೆಗೆ ಮುಗಿದಿದೆ. ನಾನು ಶಿಗ್ಗಾಂವಿಯಲ್ಲಿ ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ ಎಂದರು.

ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಪ್ರಧಾನಿ ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.

ಅತಂತ್ರ ಎಂಬ ಪ್ರಶ್ನೆ ಉತ್ತರ ನೀಡಲ್ಲ. ನಾನು 150 ಅಂತ ಎಲ್ಲೂ ಹೇಳಿಲ್ಲ. ಆದರೆ ಬಹುಮತ ಅಂತ ಹೇಳಿದ್ದೆ ಈಗಲೂ ಅದೇ ಹೇಳಿಕೆ ಬದ್ಧನಾಗಿದ್ದೇನೆ ಎಂದರು.

Loading

Leave a Reply

Your email address will not be published. Required fields are marked *