ಇಲಾಖೆಯ ಎಲ್ಲ ಕೇಂದ್ರಗಳು ಸಜ್ಜಾಗಿರುವಂತೆ ಸೂಚಿಸಿದ್ದೇವೆ: ದಿನೇಶ್ ಗುಂಡೂರಾವ್

ಬೆಂಗಳೂರು: ಆತಂಕ ಪಡುವ ಯಾವ ಅಗತ್ಯವೂ ಇಲ್ಲ, ಆತಂಕ ಪಡಲೂಬಾರದು. ಹೊಸ ತಳಿ ಇನ್ನೂ ಕರ್ನಾಟಕದಲ್ಲಿ ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ  ಪ್ರತಿಕ್ರಿಯಿಸಿದ ಅವರ ತಾಂತ್ರಿಕ ಸಲಹಾ ಸಮಿತಿ ಸಲಹೆಗಳ ಮೇಲೆ ಚರ್ಚೆ ಮಾಡಿ ಅಧಿಕೃತ ಪ್ರಕಟಣೆ ಮಾಡ್ತೀವಿ. ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅದರ ಪ್ರಕಟಣೆ ಮಾಡ್ತೇವೆ.

ಆತಂಕ ಪಡುವ ಯಾವ ಅಗತ್ಯವೂ ಇಲ್ಲ, ಆತಂಕ ಪಡಲೂಬಾರದು. ಹೊಸ ತಳಿ ಇನ್ನೂ ಕರ್ನಾಟಕದಲ್ಲಿ ದೃಢಪಟ್ಟಿಲ್ಲ. ತೀವ್ರ ಹಾನಿಕಾರಕ ಅಂತ ಕೂಡ ಇದುವರೆಗೆ ಯಾರೂ ಹೇಳಿಲ್ಲ. ಜೆಎನ್೧ ಮೇಲೆ ನಿಗಾ ವಹಿಸುತ್ತೇವೆ. ಇಲಾಖೆಯ ಎಲ್ಲ ಕೇಂದ್ರಗಳು ಸಜ್ಜಾಗಿರುವಂತೆ ಸೂಚಿಸಿದ್ದೇವೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ.

ಕೋವಿಡ್ ನಿಂದ ಉಳಿದ ಖಾಯಿಲೆಗಳಿಂದ ರಕ್ಷಣೆಗೆ ಮಾಸ್ಕ್ ಧರಿಸಲು ಹೇಳಿದ್ದೇವೆ. ಟೆಸ್ಟಿಂಗ್ ಹೆಚ್ಚಳ ಮಾಡಲು ಸೂಚನರ ನೀಡಿದ್ದೇವೆ. ಹೊಸದಾಗಿ ಆರ್.ಟಿಪಿಸಿಆರ್ ಕಿಟ್ ಖರೀದಿಗೆ ನೇರವಾಗಿ ಖರೀದಿ ಮಾಡಲು ಡಿಸಿಗಳಿಗೆ ಸೂಚಿಸಿದ್ದೇವೆ. ಎಷ್ಟರ ಮಟ್ಟಿಗೆ ಕೋವಿಡ್ ಹರಡಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

 

Loading

Leave a Reply

Your email address will not be published. Required fields are marked *