ಕರ್ನಾಟಕದ ಜನರಿಗಾಗಿ ನಾವು ಯೋಜನೆ ಘೋಷಣೆ ಮಾಡಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬಿಹಾರಕ್ಕೆ 2 ಲಕ್ಷ ಕೋಟಿ ಕೊಡ್ತೀನಿ ಅಂದ್ರಿ ಅಲ್ಲಿ ನಿತೀಶ್ ಕುಮಾರ್ ಅವರನ್ನ ಕೇಳಿ ದುಡ್ಡು ಕೊಟ್ರಾ. ಪಂಜಾಬ್‍ನಲ್ಲಿ ಲಕ್ಷ ಕೋಟಿ ಕೊಡ್ತೀನಿ ಅಂದ್ರು ಅಲ್ಲಿರೋರಿಗೆ ಹೇಳಿ ಘೋಷಣೆ ಮಾಡಿದ್ರಾ? ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar)  ಹೇಳಿದರು. ನಗರದಲ್ಲಿ ಬಿಜೆಪಿ (BJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಪಶ್ಚಿಮ ಬಂಗಾಳ (West Bengal) ದಲ್ಲಿ ಘೋಷಣೆ ಮಾಡುವಾಗ ಮಮತಾ ಬ್ಯಾನರ್ಜಿನಾ ಕೇಳಿದ್ರಾ?. ಸುಮ್ನೆ ಮಾತಾಡೋದು ಬೇಡ ನಾವು ಯಾರನ್ನೂ ಕೇಳಿ ಘೋಷಣೆ ಮಾಡಿಲ್ಲ. ಕರ್ನಾಟಕದ ಜನರಿಗಾಗಿ ನಾವು ಯೋಜನೆ ಘೋಷಣೆ ಮಾಡಿದ್ದೇವೆ ಎಂದರು.

ಕರ್ನಾಟಕಕ್ಕೆ ಒಂದು ವರ್ಷಕ್ಕೆ 4 ಲಕ್ಷ ಕೋಟಿ ಜಿಎಸ್‍ಟಿ (GST) ಸಂಗ್ರಹ ಆಗಿ ಹೋಗುತ್ತದೆ. ಮಹಾರಾಷ್ಟ್ರ ಬಿಟ್ರೆ ಹೈಯಸ್ಟ್ ಜಿಎಸ್‍ಟಿ ಪಾವತಿಸುವ ರಾಜ್ಯ ಕರ್ನಾಟಕ. ಅದರಲ್ಲಿ ನಮಗೆ 37 ಸಾವಿರ ಕೋಟಿ ಕೇಂದ್ರ ಕೊಡುತ್ತೆ. ಯಾರಿಗೆ ಆಗುತ್ತದೆ, 25 ಜನ ಸಂಸದರಿದ್ದಾರೆ ಯಾರಾದ್ರೂ ಒಬ್ಬರು ಬಾಯಿ ಬಿಟ್ಟಿದಾರಾ?. ಮೋದಿ ಸಾಹೇಬ್ರ ಜೊತೆ ಮಾತಾಡಿದ್ದಾರಾ? ಅಧಿವೇಶನದಲ್ಲಿ ಮಾತಾಡಿದ್ದಾರಾ?. ಇವತ್ತು ಅಕ್ಕಿ ಕೊಡ್ತಾ ಇಲ್ಲ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದರು.

ಅವರಿಗೆ ಹೊಟ್ಟೆ ಕಿಚ್ಚು ಅದಕ್ಕೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬಡವರ ಜೊತೆ ರಾಜಕಾರಣ ಮಾಡುತ್ತಿದೆ. ಸಿ ಎಂ, ಡಿಕೆಶಿ ಹಾಗೂ ಮುನಿಯಪ್ಪನವರು ಸೇರಿ ಎಲ್ಲರೂ ಸಹ ಬಹಳಷ್ಟು ರಾಜ್ಯ ಸರ್ಕಾರಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಜುಲೈ 1ಕ್ಕೆ ಅಕ್ಕಿಯನ್ನ ಕೊಡುವ ವಾಗ್ದಾನ ಇದೆ ಖಂಡಿತ ನಮ್ಮ ವಾಗ್ದಾನ ಪೂರೈಸುತ್ತೇವೆ ಎಂದು ಲಕ್ಷ್ಮೀ ಹೇಳಿದರು.

Loading

Leave a Reply

Your email address will not be published. Required fields are marked *