ಕೇಂದ್ರದ ಜೊತೆ ರಾಜ್ಯದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ -ಹೆಚ್ ಡಿಕೆ

ಬೆಂಗಳೂರು;- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಗಮನಿಸಿದ್ದೇನೆ. ನಾನೂ ಕೂಡ ಟ್ವೀಟ್ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದಿಂದ ಹಣ ಪಡೆಯುವ ಕೆಲಸ ಆಗಬೇಕು. ಸಿದ್ದರಾಮಯ್ಯನವರು ದೇವೇಗೌಡರು ಪ್ರಧಾನಿ ಜೊತೆ ಚೆನ್ನಾಗಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲಿ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜೊತೆ ರಾಜ್ಯದ ಪರವಾಗಿ ನಾವು ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಬ್ರೇಕ್‌ ಫಾಸ್ಟ್ ಮೀಟಿಂಗ್‌ ನಲ್ಲಿ ಜೆಡಿಎಸ್ – ಬಿಜೆಪಿಯವರನ್ನು ಕಾಂಗ್ರೆಸ್‌ ಗೆ ಕರೆತರುವ ಬಗ್ಗೆ ಚರ್ಚೆ ನಡೆದಿದೆ. ಅವರು ನಾಡಿನ ಜನರ ಬಗ್ಗೆ ಚರ್ಚೆ ಮಾಡಲು ಸಭೆ ಮಾಡುವುದಿಲ್ಲ. ಕೇವಲ ಲೋಕಸಭಾ ಚುನಾವಣೆ ಗೆಲ್ಲಲು ಮೀಟಿಂಗ್‌ ಮಾಡುತ್ತಿದ್ದಾರೆ. ಅವರಿಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಬೇಕಿಲ್ಲ ಎಂದು ಕಿಡಿಕಾರಿದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ನಮ್ಮ ಬೆಂಬಲವಿದೆ ಎಂದು ನಾನು ವ್ಯಂಗ್ಯ ಮಾಡಿದ್ದೇನೆ ಹೌದು. ಪ್ರತಿನಿತ್ಯ ನೀವು ಬನ್ನಿ, ನೀವು ಬನ್ನಿ ಅಂತ ಎಲ್ಲರನ್ನು ಕರೆಯುತ್ತಿದ್ದಾರೆ. ಮುಖ್ಯಮಂತ್ರಿಗಳೇ ಕನಿಷ್ಠ 50 ಜನರನ್ನಾದರು ಪಕ್ಷಕ್ಕೆ ಕರೆತರಬೇಕೆಂದು ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ.

ಪ್ರತಿ ನಿತ್ಯ ನಮ್ಮ ಶಾಸಕರ ಮನೆ ಮುಂದೆ ಏಕೆ ಹೋಗುತ್ತೀರಾ. ಒಳ್ಳೆಯ ಕೆಲಸ ಮಾಡುವುದಾದರೆ ಎಲ್ಲರನ್ನು ನಾನೇ ಕಳುಹಿಸುತ್ತೇನೆ. ಕರೆದುಕೊಂಡು ಹೋಗುವಂತೆ ಹೇಳಿದ್ದೇನೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಾವಾಗ ಆಗುತ್ತಾರೆ ಎಂಬುದನ್ನು ಕಾಂಗ್ರೆಸ್ ನವರು ಹೇಳಬೇಕು ಎಂದರು. ಲೋಕಸಭೆ ಚುನಾವಣೆ ಮುಗಿದ ಮೇಲೆ ಬಿಜೆಪಿ – ಜೆಡಿಎಸ್ ಈ ರಾಜ್ಯದಲ್ಲಿ ಇರೋದೆ ಇಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಪಾರ್ಲಿಮೆಂಟ್ ಚುನಾವಣೆ ಮುಗಿದ ಮೇಲೆ ಈ ರಾಜ್ಯದಲ್ಲಿ ಮಾತ್ರ ಅಲ್ಲ. ಈ ದೇಶದಲ್ಲಿಯೇ ಕಾಂಗ್ರೆಸ್ ಇರುತ್ತಾ ಯೋಚನೆ ಮಾಡಲಿ ಎಂದು ಕುಮಾರಸ್ವಾಮಿ ಟಾಂಗ್‌ ನೀಡಿದರು.

Loading

Leave a Reply

Your email address will not be published. Required fields are marked *