ವಿಜಯೇಂದ್ರ ಆಯ್ಕೆ ನಮ್ಮಲ್ಲಿ ಅಸಮಾಧಾನ ಇಲ್ಲ – ಎಸ್ ಆರ್ ವಿಶ್ವನಾಥ್

ದೇವನಹಳ್ಳಿ:- ವಿಜಯೇಂದ್ರ ಪರ ಶಾಸಕ ಎಸ್.ಆರ್.ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ. ಈ ಸಂಬಂಧ ಯಲಹಂಕದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕ ಹಿನ್ನಲೆ ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆಲವರು ಈ ವಿಷಯಾನ ದೊಡ್ಡದು ಮಾಡಲು ಹೊರಟಿದ್ದಾರೆ, ಬಿಜೆಪಿ ಕೇಡರ್ ಬೇಸಿಸ್ ಪಕ್ಷ. ಯಾಡಿಯೂರಪ್ಪರವರನ್ನ ನಾವು ಲಿಂಗಾಯಿತರೆಂದು ನೋಡಿದ್ವಾ..!? ಇಲ್ಲ. ಬಿಎಸ್ ವೈ ನಮ್ಮ‌ ನೆಚ್ಚಿನ‌ ರಾಜ್ಯದ ನಾಯಕರು. ನಮಗೆ ಭಾರತ ದೇಶ ಮುಖ್ಯ. ನಾವು ಜಿಲ್ಲೆ, ಪ್ರಾಂತ, ಜಾತಿ ಎಂದು ಪಕ್ಷ ಕಟ್ಟಿ ಬೆಳೆಸಿದವರಲ್ಲ, ಸಿ.ಟಿ‌.ರವಿ ರವರು ಪಕ್ಷದಲ್ಲಿ, ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದವರು

ಅವರು ಆ ರೀತಿ ಅಸಮಾಧಾನ ಹೊರಹಾಕಿರುವುದಿಲ್ಲ. ನಮಗೆ ಆಗದಿರುವವರು ಸಣ್ಣ ವಿಷಯಾನ‌ ದೊಡ್ಡದು ಮಾಡ್ತಿದ್ದಾರೆ. ನಮ್ಮ ಯಾವ ನಾಯಕರಲ್ಲು ವಿಜಯೇಂದ್ರರವರ ಆಯ್ಕೆ ಬಗ್ಗೆ ಅಸಮಾಧನವಿಲ್ಲ. ರಾಜ್ಯಾದ್ಯಕ್ಷ ಹುದ್ದೆ ನಿರ್ವಹಿಸುವಷ್ಟು ಸಾಮರ್ಥ್ಯ ವಿಜಯೇಂದ್ರರವರಿಗಿದೆ ಎಂದು ಯಲಹಂಕದ ಹೊನ್ನೇನಹಳ್ಳಿಯಲ್ಲಿ ನಡೆದ ತಾಲೂಕು ‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *