ಬೆಂಗಳೂರು ;- ಕಾವೇರಿ ವಿವಾದ ಹೊಸದಲ್ಲ. ನ್ಯಾಯಾಧೀಕರಣದ ಆದೇಶವೂ ಆಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರೈತರ ಹಿತ ಕಾಯಲು ಪ್ರತಿಪಕ್ಷದ ಸದಸ್ಯನಾಗಿ ನಮ್ಮ ನಮ್ಮ ಕೆಲಸ ಮಾಡುತ್ತಿದ್ದೇನೆ. ಆದರೆ ಕಾಂಗ್ರೆಸ್ನವರೇ ಈ ವಿಚಾರವನ್ನು ರಾಜಕೀಯಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾವೇರಿ ವಿವಾದ ಹೊಸದಲ್ಲ. ನ್ಯಾಯಾಧೀಕರಣದ ಆದೇಶವೂ ಆಗಿದೆ. ಯಾವ್ಯಾವ ರೈತರು ಬೆಳೆಯುವಂತಹ ಬೆಳೆಗಳಿಗೆ ಎಷ್ಟು ನೀರು ಬಿಡಬೇಕು ಅಂತ ತೀರ್ಮಾನ ಆಗಿದೆ. ತಮಿಳುನಾಡಿನ ಕುರುವೈ ಬೆಳಗೆ 1.80 ಲಕ್ಷ ಹೆಕ್ಟೇರ್ಗೆ 35 ಟಿಎಂಸಿ ನೀರು ಬೀಡಬೇಕು. ಈ ವರ್ಷ 4 ಲಕ್ಷ ಹೆಕ್ಟೇರ್ನಷ್ಟು ಬೆಳೆ ಬೆಳೆದಿದ್ದಾರೆ. 32 ಟಿಎಂಸಿ ನೀರು ಬದಲಿಗೆ 60 ಟಿಎಂಸಿ ನೀರು ಬಳಕೆಯಾಗಿದೆ. ನಮ್ಮ ಅಧಿಕಾರಿಗಳು ಪ್ರಶ್ನಿಸಬೇಕಿತ್ತು, ಪ್ರತಿಭಟನೆ ಮಾಡಬೇಕಾಗಿತ್ತು.
ಆದರೆ ಆ ಕೆಲಸ ಮಾಡಿಲ್ಲ. ಸರಕಾರ ಇದರ ಬಗ್ಗೆ ಕಾಳಜಿ ವಹಿಸಿಲ್ಲ. ನಮ್ಮ ರೈತರು ಕೇಳುತ್ತಿರುವುದು ನಮ್ಮ ರೈತರ ನೀರು. ನೀರು ಬಿಡುವುದಕ್ಕೆ ಸಮಯಕ್ಕೆ ಸರಿಯಾಗಿ ಸಭೆ ನಡೆಸಲಿಲ್ಲ. ವಿಳಂಬ ಮಾಡಿದರು, ಡ್ಯಾಮ್ನಲ್ಲಿ ನೀರು ಇರುವುದನ್ನು ಕಂಡು ತಮಿಳುನಾಡು ನೀರು ಕೇಳುತ್ತಿದೆ. ಅವರು ಕೇಳಿದ ತಕ್ಷಣ ಇವರು ಬಿಟ್ಟಿದ್ದಾರೆ.
ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನ್ಯಾಯ ಆಗುತ್ತಿದೆ. ಕುಡಿಯುವ ನೀರಿಗೆ ಬೆಂಗಳೂರು ಮತ್ತು ಇತರ ಕಾವೇರಿ ಜಲಾನಯನ ವ್ಯಾಪ್ತಿಯ ಜನಗಳು ಇತರ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಮಳೆ ಕಡಿಮೆಯಾಗಿ ನೀರಿನ ಒಳ ಹರಿವು ಕಡಿಮೆಯಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ 10 ಟಿಎಂಸಿ ನೀರು ಬಿಡುತ್ತೇವೆ ಎಂದು ರಾಜ್ಯ ಸರಕಾರ ಹೇಳುತ್ತಿದೆ ಎಂದು ಸರ್ಕಾರದ ನಡೆಗೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು.