ಬಿಜೆಪಿಯವರು ಹೋರಾಟ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜಿನಾಮೆ ಯಾಕೆ ಕೊಡಬೇಕು? ಆಡಿಯೋ ಏನೇ ಇರಲಿ ತನಿಖೆ ನಡೆಯಲಿದೆ. ಆತ ನನಗೆ ಪರಿಚಯವಿಲ್ಲವೆಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಸಾಲ ಆಗಿತ್ತು ಅಂತಾ ಕುಟುಂಬದವರೇ ವಿಡಿಯೋ ಹೇಳಿಕೆ ನೀಡಿದ್ದಾರೆ.

ಶಿವಕುಮಾರ್ ಮೊಬೈಲ್ ಸಿಗಲಿ, ಮೊಬೈಲ್ ಇಲ್ಲ ಅಂತಾ ಹೇಳುತ್ತಿದ್ದಾರೆ. ಪಾರದರ್ಶಕವಾಗಿ ತನಿಖೆ ಮಾಡುವಂತೆ ಕಲಬುರಗಿ ಎಸ್ಪಿಗೆ ಹೇಳಿದ್ದೇನೆ. ಬಿಜೆಪಿಯವರು ಹೋರಾಟ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುತ್ತೆ ಅಂತಾ ಗೊತ್ತಾಗಿರಬೇಕು. ಹಾಗಾಗಿ ಐಟಿ, ಇ ಡಿಯನ್ನ ನಮ್ಮ ನಾಯಕರ ವಿರುದ್ದ ಉಪಯೋಗ ಮಾಡುತ್ತಿದ್ದಾರೆ ಎಂದರು.

Loading

Leave a Reply

Your email address will not be published. Required fields are marked *