ಹಳೆಯ ಸಮಸ್ಯೆಗಳು ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ: ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ. ಯುದ್ಧವು ಅದನ್ನು ಮತ್ತಷ್ಟು ಆಳಗೊಳಿಸಿದೆ. ಹಳೆಯ ಸಮಸ್ಯೆಗಳು ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಾಯಸ್ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು. ನಾವು ಕೋವಿಡ್ ಅನ್ನು ಸೋಲಿಸಲು ಸಾಧ್ಯವಾದರೆ, ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯ ಮೇಲೂ ನಾವು ಜಯಗಳಿಸಬಹುದು ಎಂದರು.

ಜಿ20 ಅಧ್ಯಕ್ಷರಾಗಿ ಭಾರತವು ನಂಬಿಕೆ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಇಡೀ ಜಗತ್ತಿಗೆ ಮನವಿ ಮಾಡುತ್ತದೆ. ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು. ಆಫ್ರಿಕನ್ ಯೂನಿಯನ್ (African Union) ಅನ್ನು ಶಾಶ್ವತ ಜಿ20 ಸದಸ್ಯರನ್ನಾಗಿ ಮಾಡಲು ಭಾರತ ಪ್ರಸ್ತಾಪಿಸುತ್ತದೆ. ಈ ಪ್ರಸ್ತಾವನೆಯನ್ನು ಎಲ್ಲಾ ಸದಸ್ಯರು ಒಪ್ಪುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು

Loading

Leave a Reply

Your email address will not be published. Required fields are marked *