ವಿಜಯಪುರ: ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವಿಜಯಪುರ ಡಿಡಿಪಿಐ ಹಾಗೂ ವಿಜಯಪುರ ಡಯಟ್‌ನ ಹಿರಿಯ ಉಪನ್ಯಾಸಕರಿಬ್ಬರನ್ನು ಅಮಾನತು ಮಾಡಲಾಗಿದೆ. ಐಇಡಿಎಸ್‌ಎಸ್ ಯೋಜನೆ ಅನುಷ್ಠಾನ ಮಾಡುವಲ್ಲಿ ಗಂಭೀರ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊಡಿಸಲಾಗಿದೆ. ವಿಜಯಪುರ ಡಿಡಿಪಿಐ ಎನ್‌ಹೆಚ್ ನಾಗೂರ, ವಿಜಯಪುರ ಡಯಟ್ ಹಿರಿಯ ಉಪನ್ಯಾಸಕರಾದ ಎಸ್‌ಎ ಮುಜಾವರ, ಎಎಸ್ ಹತ್ತಳ್ಳಿ ಅಮಾನತು ಆದ ಅಧಿಕಾರಿಗಳು. 2009-10 ಹಾಗೂ 2011-12 ರಲ್ಲಿ ಐಇಡಿಎಸ್‌ಎಸ್ ಯೋಜನೆ ಅನುದಾನ ದುರುಪಯೋಗ ಮಾಡಿರೋ ಆರೋಪ ಇವರ ಮೇಲೆ ಇದೆ.
ಇವರು ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದಾರೆ. ನಿಯಮ ಬಾಹಿರವಾಗಿ ಅಸ್ತಿತ್ವದಲ್ಲಿ ಇರದ ಎನ್‌ಜಿಓಗಳಿಗೆ ಹಣ ಬಿಡುಗಡೆ ಮಾಡಿರೋ ಆರೋಪ ಇದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಂದ ಅಮಾನತು ಆದೇಶ ಮಾಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪರಿಂದ ಅಮಾನತು ಆದೇಶ ಮಾಡಲಾಗಿದೆ.