ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ 45 ಪರ್ಸೆಂಟ್ ಸರ್ಕಾರ ಆರೋಪಕ್ಕೆ ಶಾಸಕವಿಜಯಾನಂದ ಕಾಶಪ್ಪನವರ್ತಿರುಗೇಟು ನೀಡಿದ್ದಾರೆ. ನೋಡಿ ಕುಮಾರಸ್ವಾಮಿ ಅವರನ್ನ ರಾಜ್ಯದ ಜನತೆ ಅವರನ್ನು ಎಲ್ಲಿ ಅವರು ಕೂರಿಸಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬೇಕು.
ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾರಲ್ಲ ಈ ತರಹ ಬೇಜವಾಬ್ದಾರಿಯಿಂದ, ಅವರಿಗೆ ಜನರು ತಕ್ಕ ಉತ್ತರ ಕೊಟ್ಟಿಲ್ವಾ? 19 ಸೀಟ್ ಗೆಲ್ಲಿಸಿ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ. ಯಾಕಂದರೇ ಇವರದ್ದು ಇದೆ ಆಟ ಆ ಸರಕಾರದ ಜೊತೆ ಭಾಗಿಯಾದೆ. ಈ ಸರಕಾರದ ಜೊತೆ ಭಾಗಿಯಾದೆ. ತಂದೆ-ಮಗಂದು ಏನು ಕೆಲಸ? ಇಬ್ಬರಿಗೂ ಭ್ರಷ್ಟಾಚಾರ ಬಿಟ್ಟರೆ ಏನು ಉದ್ಯೋಗವಿಲ್ಲ. ಇದು ಜೆಡಿಎಸ್ ಅಪ್ಪ-ಮಗನ ಪಕ್ಷ ಎಂದು ವಾಗ್ದಾಳಿ ಮಾಡಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇವರೇ ಈ ಹಿಂದೆ ಬಿಜೆಪಿ ಜೊತೆ ಎಷ್ಟು ಸಾರಿ ಶಾಮೀಲಾಗಿಲ್ಲ ? ಎಷ್ಟು ಸಾರಿ ಬಿಜೆಪಿ ಜೊತೆ ಶಾಮೀಲಾಗಿ ಕಾಂಗ್ರೆಸ್ ಸೋಲಿಸುವ ಕೆಲಸಮಾಡಿಲ್ಲ. ಇವರು ಎಷ್ಟು ಪರ್ಸೆಂಟ್ ಕಮೀಷನ್ ಹೊಡೆದರು ಹೇಳಲಿ? ಕುಮಾರಸ್ವಾಮಿ ಬೇಡವೇ ಬೇಡ ಅಂತ ಜನ ಮೂಲೆಗೆ ಒತ್ತಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಹೇಳಿದರು.