ಬೆಂಗಳೂರು ;- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ, ಹೆಬ್ಬಾಳದಲ್ಲಿ ವಾಹನ ಓಡಾಟ ಮಾಡಲು ಸವಾರರು ಪರದಾಟ ನಡೆಸಿದ್ದಾರೆ. ದಿಢೀರ್ ಬಂದ ಮಳೆಗೆ ರಸ್ತೆಪೂರ ಹೊಳೆಯಂತಾಗಿತ್ತು. ರಸ್ತೆಗಳಲ್ಲಿ ದೊಡ್ಡ ಮಟ್ಟದಲ್ಲಿ ನೀರು ಶೇಖರಣೆಯಾಗಿರುವುದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯು ಉಂಟಾಗಿತ್ತು.
ಹೆಬ್ಬಾಳ ಫೈಓವರ್ ಕೆಳಗೆ ಆಳ ಎತ್ತರಕ್ಕೆ ಮಳೆ ನೀರು ನಿಂತಿದ್ದು, 12 ಗಂಟೆ ಸುಮಾರಿಗೆ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ನಿಂತಿದ್ದ ನೀರನ್ನು ತೆರವು ಗೊಳಿಸುವು ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಪೊಲೀಸ್ ಕಾನ್ಸ್ ಟೇಬಲ್ ಕಾರ್ಯಕ್ಕೆ ಪೊಲೀಸ್ ಕಮಿಷನರ್ ದಯಾನಂದ್ ಟ್ಟೀಟ್ ಮೂಲಕ ಶ್ಲಾಘಿಸಿದ್ದಾರೆ.