ವರ್ತೂರ್‍ ಸಂತೋಷ್‌ಗೆ ಸಿಕ್ತಾ ಎಲಿಮಿನೇಷನ್‌ ಸ್ವಾಗತ?

ವರ್ತೂರ್ ಸಂತೋಷ್‌ ಬಿಗ್‌ಬಾಸ್ ಮನೆಗೆ ಮರಳಿದ್ದಂತೂ ಆಗಿದೆ. ಮನೆಯ ಸದಸ್ಯರೆಲ್ಲರೂ ಅವರನ್ನು ಕಂಡು ಸಂತೋಷಪಟ್ಟಿದ್ದಾರೆ. ಆದರೆ ಆ ಸಂತೋಷ ಎಷ್ಟು ಹೊತ್ತು? ಸಂತೋಷ್ ಮುಖದಲ್ಲಿಯೇ ಸಂತೋಷ ಮಾಯವಾಗುವಂತೆ ಬಂದೆರಗಿದೆ ಎಲಿಮಿನೇಷನ್‌ನ ನಾಮಿನೇಷನ್‌ ಸೆಷನ್! JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಂತೋಷ್, ಅಗ್ನಿಪರೀಕ್ಷೆಯ ಈ ಗಳಿಗೆಗಳು ದಾಖಲಾಗಿವೆ. ಮನೆಯ ಸದಸ್ಯರಲ್ಲಿ ಹಲವರು ಸಂತೋಷ್‌ ಎಲಿಮಿನೇಷನ್‌ಗೆ ನಾಮಿನೇಟ್ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವೂ ಸಮರ್ಥನೀಯವೇ ಎನ್ನಿ!

ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿದೆ. ಸ್ಪರ್ಧಿಗಳು ಹಲವು ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮನ್ನು ತಾವು ‘ಸೇಫ್‌’ ಮಾಡಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲ ಸವಾಲುಗಳ ಸಮಯದಲ್ಲಿ ವರ್ತೂರ್ ಸಂತೋಷ್ ಇರಲಿಲ್ಲ. ಅವರಿಗೆ ಅದೊಂದು ಅಡ್ವಾಂಟೇಜ್. ಹಾಗಾಗಿ ಅವರು ಈಗ ಮನೆಯಲ್ಲಿ ಸೇಫ್‌ ಜೋನ್‌ನಲ್ಲಿ ಇರುವುದು ನ್ಯಾಯವಲ್ಲ ಎನ್ನುವುದು ಅವರ ವಾದ.

ಸಂಗೀತಾ, ವಿನಯ್, ಸ್ನೇಹಿತ್ ಸೇರಿದಂತೆ ಬಹುತೇಕ ಸದಸ್ಯರು, ಸಂತೋಷ್‌ ಅವರನ್ನು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆಯೇ ಸಂತೋಷ್‌ ಮುಖದಲ್ಲಿನ ಸಂತೋಷದ ನಗು ಮಾಯವಾಗಿದೆ. ಒಂದು ವಾರದಲ್ಲಿ ಮನೆಯೊಳಗಿನ ಲೆಕ್ಕಾಚಾರಗಳೆಲ್ಲ ಬದಲಾಗಿವೆ, ಹಾಗಾಗಿ ಇಲ್ಲಿ ಉಳಿದುಕೊಳ್ಳಲು ತಾವು ನಡೆಸುವ ಸ್ಟ್ರಾಟಜಿ ಕೂಡ ಬದಲಾಗಬೇಕು ಎಂಬುದು ಅವರ ಅರಿವಿಗೆ ಬಂದಂತಿದೆ. ಈಗಷ್ಟೇ ಮನೆಯ ಹೊರಗೆ ಒಂದು ಪರೀಕ್ಷೆಯನ್ನು ಎದುರಿಸಿ ಮರಳಿರುವ ಸಂತೋಷ್ ಮನೆಯೊಳಗಿನ ಹಲವು ರೀತಿಯ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾರೆ? ಅದರಲ್ಲಿ ಗೆಲ್ಲುತ್ತಾರಾ ಅಥವಾ ಸೋತು ಮರಳುತ್ತಾರಾ?

Loading

Leave a Reply

Your email address will not be published. Required fields are marked *