ಕೆಆರ್ ಪುರ;- ಬೆಂಗಳೂರಿನ ವರ್ತೂರಿನಲ್ಲಿ ಬಿಗ್ ಬಾಸ್ ಸ್ವರ್ಥಿ ವರ್ತೂರು ಸಂತೋಷ್ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸಿಹಿಹಂಚಿ , ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಬಳಿಕ ಎಸ್ ಎಸ್ ವಿ ಡೆವಲಪರ್ಸ್ ಮುಖ್ಯಸ್ಥ ರಘು ಅವರು ಮಾತನಾಡಿ, ವರ್ತೂರು ಸಂತೋಷ್ ಅವರಿಗೆ ನ್ಯಾಯಲಯದಿಂದ ಜಮೀನು ಸಿಗುವ ನಿರೀಕ್ಷೆ ಇತ್ತು . ಸತ್ಯಕ್ಕೆ ಜಯ ಸಿಕ್ಕಿದ ಹಿನ್ನೆಲೆ ವರ್ತೂರಿನಲ್ಲಿ ಸಂಭ್ರಮಾಚರಣೆ ನಡೆಯಲಿದೆ.
ಪರಪ್ಪನ ಅಗ್ರಹಾರದಿಂದ ಮನೆಗೆ ಆಗಮಿಸಿ ,ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬಿಗ್ ಬಾಸ್ ಗೆ ತೆರಲುವುದು ಸಂಶಯ ..! ಸಂತೋಷ್ ಗೆ ತುಂಬಾ ಬೇಸರವಾಗಿದೆ .ಅರಣ್ಯ ಅಧಿಕಾರಗಳು ಹಿಂದುಳಿದ ಪ್ರತಿಭೆ ತುಳಿಯುವ ಪ್ರಯತ್ನ ನಡೆಯುತ್ತಿದೆ . ಅರಣ್ಯ ಅಧಿಕಾರಗಳು ಮೊದಲು ಸಂತೋಷ್ ಅವರಿಗೆ ನೋಟಿಸ್ ನೀಡಿಲ್ಲ ಸಂತೋಷ್ ಅವರಿಗೆ ಹುಲಿ ಉಗುರು ಉಡುಗೊರೆ ನೀಡಿರಬಹುದು ..? ಗೋ ರಕ್ಷಣೆ ಮಾಡುವುದಕ್ಕೆ ನಿಂತು , ಸಾರ್ವಜನಿಕರಲ್ಲಿ ಜಾನುವಾರುಗಳ ಬಗ್ಗೆ ಜಾಗ್ರತಿ ನೀಡಿದಕ್ಕೆ ಇಂತಹ ಕುತಂತ್ರ ನಡೆದಿದೆ . ಒಂದು ವೇಳೆ ಸಂತೋಷ ಮೇಲೆಯ ಆರೋಪ ಸುಳ್ಳಾದರೆ ,ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗುವುದು .
ಸಂತೋಷ್ ಬದಲ್ಲಾಗಿ , ರಾಜಕಾರಣಿಗಳ ಮಕ್ಕಳು ಅಥವಾ ನಟರ ಮಕ್ಕಳು ಇದ್ದರೇ ಸಂತೋಷ ಮಾದರಿಯಲ್ಲೇ ಬಂಧನ ಮಾಡ್ತೀರಾ…! ಸಂತೋಷ್ ವಿಷಯವಾಗಿ ಬಿಗ್ ಬಾಸ್ , ನಿರೂಪಕ ಹಾಗೂ ನಟ ಸುದೀಪ್ ಅವರನ್ನು ಪ್ರಶ್ನೆ ಮಾಡ್ತೇವೆ .. ಹೇಗೆ ಸಂತೋಷ್ ಅವರನ್ನ ಬಂಧನ ಮಾಡಲು ಅನುಮಾತಿ ನೀಡಿದೀರಿ . ಅರಣ್ಯ ಅಧಿಕಾರಗಳು ಗಣ್ಯರನ್ನ ಬಿಟ್ಟು ರೈತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಸಂತೋಷ್ ಬಿಗುಡುಗೆ ಕರ್ನಾಟಕ ಜನತೆ ಬೆಂಬಲ ಸೂಚಿಸಿದರು ಎಂದರು. ಇನ್ನೂ ವರ್ತೂರು ಸಂತೋಷ್ ಧರ್ಮಸ್ಥಳದ ಮಂಜುನಾಥ್ ಸ್ವಾಮಿಯ ದರ್ಶನ ನಂತರ ಬಿಗ್ ಬಾಸ್ ಮತ್ತೆ ತೆರಲುವ ನಿರ್ಧಾರ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಖಾಸಗಿ ರೆಸಾರ್ಟ್ ನಲ್ಲಿ ವರ್ತೂರು ಸಂತೋಷ್ ವಿಶ್ರಾಂತಿ ಪಡೆಯುತ್ತಿದ್ದಾರೆ.