ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ವಿಧಾನಸಭೆ ನೂತನ ಸಭಾಧ್ಯಕ್ಷರು ಯಾರು ಆಗಲಿದ್ದಾರೆ ಎನ್ನುವುದಕ್ಕೆ ತೆರೆ ಬಿದ್ದಿದೆ. ಸ್ಪೀಕರ್ ಆಗಿ ಶಾಸಕ ಯು.ಟಿ ಖಾದರ್ ಆಯ್ಕೆಯಾಗಿದ್ದಾರೆ.
ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ನೂತನ ಸಭಾಧ್ಯಕ್ಷರ ಆಯ್ಕೆಗಾಗಿ ಪ್ರಕ್ರಿಯೆಗಳು ನಡೆಯಿತು.
ಈ ವೇಳೆ ಸರ್ವಾನುಮತದಿಂದ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ ಮಾಡಲಾಗಿದೆ.
ನೂತನ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆಯಾಗುತ್ತಿದ್ದಂತೆ, ಹಂಗಾಮಿ ಸ್ಪೀಕರ್ ಆಗಿದ್ದಂತ ಆರ್ ವಿ ದೇಶಪಾಂಡೆ ಅವರು ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ನೂತನ ಸ್ಪೀಕರ್ ಆಗಿ ಆಯ್ಕೆಯಾದಂತ ಯು.ಟಿ ಖಾದರ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ವಿವಿಧ ಸದನದ ಸದಸ್ಯರು ಶುಭಾಶಯಗಳನ್ನು ಕೋರಿದರು.