ಚಿಕ್ಕಮಗಳೂರು : ಶೃಂಗೇರಿ ನೆಮ್ಮಾರ್ ಬಳಿ ದಾರುಣ ಘಟನೆ ಸಂಭವಿಸಿದ್ದು, ನದಿಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ವರದಿಯಾಗಿದೆ.
ಶೃಂಗೇರಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ (20) ರಕ್ಷಿತ್ (20) ಎಂಬ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.
ನೆಮ್ಮಾರಿಯ ಸುಂಕದಮಕ್ಕಿ ತೂಗುಸೇತುವೆ ಬಳಿ ಈಜಲೆಂದು ನದಿಗಿಳಿದಿದ್ದು, ಈ ವೇಳೆ ನೀರು ಪಾಲಾಗಿದ್ದಾರೆ. ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.