ತಾಜ್ ಹೋಟೆಲ್ ಸ್ಫೋಟಿಸಲು ಇಬ್ಬರು ಪಾಕಿಸ್ತಾನಿಗಳು ನಗರಕ್ಕೆ ಬರಲಿದ್ದಾರೆ: ಪೊಲೀಸರಿಗೆ ಬೆದರಿಕೆ ಕರೆ

ಮುಂಬೈ: ತಾಜ್ ಹೋಟೆಲ್ (Taj Hotel) ಅನ್ನು ಸ್ಫೋಟಿಸಲು ಇಬ್ಬರು ಪಾಕಿಸ್ತಾನಿಗಳು ನಗರಕ್ಕೆ ಬರಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ (Mumnai Police) ಗುರುವಾರ ಬೆದರಿಕೆ ಕರೆ (Threatening Call) ಬಂದಿದೆ.ಮುಂಬೈ ಪೊಲೀಸ್‌ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂದಿದೆ. ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತ ಭೂಪ್ರದೇಶ ಪ್ರವೇಶಿಸಿ ನಗರದ ಸುಪ್ರಸಿದ್ಧ ಹೋಟೆಲ್ ಅನ್ನು ಸ್ಫೋಟಿಸಲಿದ್ದಾರೆ ಎಂದು ಬೆದರಿಕೆ ಕರೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಖೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ನಿಜ ಹೆಸರು ಜಗದಂಬ ಪ್ರಸಾಸ್ ಸಿಂಗ್ ಆಗಿದ್ದು, ಆತ ಉತ್ತರ ಪ್ರದೇಶದ ಗೊಂಡಾ ಮೂಲದ ವ್ಯಕ್ತಿಯಾಗಿದ್ದಾನೆ. ಪ್ರಸ್ತುತ ಆತ ಸಾಂತಾಕ್ರೂಜ್‌ನಲ್ಲಿ ವಾಸವಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬೆದರಿಕೆ ಕರೆ ಬಳಿಕ ನಗರ ಪೊಲೀಸರು ಎಚ್ಚರವಾಗಿದ್ದು, ತನಿಖೆ ಆರಂಭಿಸಿದ್ದಾರೆ. ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ 2008ರಲ್ಲಿ ನಗರದಲ್ಲಿ ನಡೆದ ಉಗ್ರರ ದಾಳಿಗೆ ಗುರಿಯಾಗಿತ್ತು. ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿವೆ.

Loading

Leave a Reply

Your email address will not be published. Required fields are marked *