ಎರಡು ಕಿ.ಮೀ. ತನಕ ಶಬ್ದ ಕೇಳಿಸುವ, 2,400 ಕೆ.ಜಿ. ಅಷ್ಟಧಾತು ಘಂಟೆ!

ಲಕ್ನೋಅಯೋಧ್ಯೆ ರಾಮಜನ್ಮಭೂಮಿಗೆ 2,400 ಕೆ.ಜಿ ತೂಕದ ಬೃಹತ್ ಘಂಟೆ ತಲುಪಿದೆ. ಹೌದು ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ತಲುಪಿದೆ. ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್‌ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಅಯೋಧ್ಯೆಗೆ ತಲುಪಿದೆ.

ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.

ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು ಕೊಡುಗೆಯಾಗಿ ನೀಡಲು ಬಯಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ. ಎಂದರು.

Loading

Leave a Reply

Your email address will not be published. Required fields are marked *