ಬಳ್ಳಾರಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಖಾತೆ ತೆರೆಯುತ್ತಿವೆ. ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿದ್ದು, ಜಿಂದಾಲ್ ಉಕ್ಕಿನ ಕಾರ್ಖಾನೆಯು ಗಣಿ ನಾಡಿನ ಜನರ ನಿದ್ದೆ ಕೆಡಿಸಿದೆ. ಹೊರ ರಾಜ್ಯದಿಂದ ಬಂದ ಇಬ್ಬರು ಜಿಂದಾಲ್ʼನ ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಕಳೆದ ಎರಡು ದಿನಗಳ ಹಿಂದೆ ಜಿಂದಾಲ್ ನ ಇಬ್ಬರು ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಬ್ಬರನ್ನೂ ಹೋಂ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಅವರಿಗೆ ಯಾವ ರೀತಿ ಕೊರೊನಾ ಬಂತು ಅನ್ನೋದರ ಬಗ್ಗೆ ಅವರ ಟ್ರಾವಲ್ ಹಿಸ್ಟರಿ ಸಂಗ್ರಹ ಮಾಡಲು ಮುಂದಾಗಿದೆ.