ನೀರಾವರಿ ಸೌಲಭ್ಯವಿರುವ ಹಲವೆಡೆ ಆಹಾರಧಾನ್ಯ ಬೆಳೆಯಾಗಿ ಭತ್ತವನ್ನು ಬೆಳೆದಿದ್ದು ಪ್ರಸ್ತುತ ತೆಂಡೆ ಹಾಗೂ ಹಾಲ್ದುಂಬುವ ಹಂತಗಳಲ್ಲಿದ್ದು ಕೊಳವೆಹುಳು ಹಾಗೂ ತೆನೆ ತಿಗಣೆ ಬಾಧೆ ಕಂಡುಬಂದಿದ್ದು, ಅವುಗಳ ಹತೋಟಿ ಯಾವ ರೀತಿ ಮಾಡಬೇಕೆಂದು ರೈತರು ಚಿಂತೆ ಮಾಡುತ್ತಿದ್ದಾರೆ.ಕೊಳವೆ ಹುಳುವಿನ ಮರಿಹುಳು ಗರಿಗಳ ತುದಿಯನ್ನು ಕತ್ತರಿಸಿ ಕೊಳವೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಕೊಳವೆಯಲ್ಲಿ ಹಸಿರುಹುಳು ಹುಳು ಕೊಳವೆ ಸಮೇತ ಗರಿಗಳ ತಳಭಾಗಕ್ಕೆ ಅಂಟಿಕೊಂಡು ಗರಿಗಳನ್ನು ಕೆರೆದು ತಿನ್ನುತ್ತವೆ. ಅಂತಹ ಗರಿಗಳನ್ನು ವೀಕ್ಷಿಸಿದಾಗ ಏಣಿಯಾಕಾರದ ಗೆರೆಗಳು.
ಗದ್ದೆಯ ನೀರಿನ ಮೇಲೆ ಸೀಮೆಎಣ್ಣೆಯನ್ನು ಅಲ್ಲಲ್ಲಿಸುರಿದು ರೈರನ್ನು ಹಗ್ಗದಿಂದ ಅಲ್ಲಾಡಿಸಿದರೆ ಹುಳುಗಳು ನೀರಿಗೆ ಬಿದ್ದು ಉಸಿರಾಟಕ್ಕೆ ತೊಂದರೆಯಾಗಿ ಸಾಯುತ್ತವೆ. ಕೀಟದ ಹಾವಳಿ ತೀವ್ರವಾಗಿದ್ದಲ್ಲಿ ಕ್ವಿನಾಲ್ಫಾಸ್ 2.0 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬಹುದು ಎಂದರು. ತಿಳಿ ಹಸಿರು- ಕಂದು ಬಣ್ಣದ ದೋಣಿಯಾಕಾರದ ತೆನೆ ತಿಗಣೆ ತೆನೆ ಹಾಲ್ದುಂಬುವ ಸಮಯದಲ್ಲಿ ಕಾಳಿನಿಂದ ರಸ ಹೀರುತ್ತವೆ. ಅಂತಹ ಕಾಳುಗಳ ಮೇಲೆ ಕರಿ ಚುಕ್ಕೆ ನಂತರ ಚೀಕಲು ಕಾಳು ಅಥವಾ ಜಳ್ಳು ಕಾಳುಗಳು ಹೆಚ್ಚಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಈ ಕೀಟದ ಪ್ರತಿ ತೆನೆಗೆ ಒಂದಕ್ಕಿಂತ ಜಾಸ್ತಿಯಿದ್ದಲ್ಲಿ ಮೆಲಾಥಿಯಾನ್ 50 ಇಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ. ಬೆರೆಸಿ ಸಿಂಪಡಿಸಬಹುದು.