ಸಾಮಾನ್ಯವಾಗಿ ಕಾಡುವ ಎದೆಯುರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಬಹಳ ಯಾತನೆಯನ್ನು ಕೊಡುತ್ತದೆ. ಕೆಲವರಿಗೆ ಇದು ಮೇಲಿಂದ ಮೇಲೆ ಕಾಡಿದರೆ, ಇನ್ನು ಕೆಲವರಿಗೆ ಕೆಲವೊಮ್ಮೆ ಮಾತ್ರ ಕಾಡುತ್ತದೆ. ಕೆಲವರಿಗೆ ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರು ಎದೆಯುರಿ ಆರಂಭವಾಗುತ್ತದೆ. ಕೆಲವರಿಗೆ ಎದೆಯಲ್ಲಿ ಬೆಂಕಿಯುರಿದ ಅನುಭವವಾಗುತ್ತದೆ. ಜಠರದ ಒಳಪದರದಲ್ಲಿನ ಉರಿಯೂತವೇ ಈ ಸಮಸ್ಯೆಗೆ ಮೂಲ ಕಾರಣ.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಾಗಲು ಹೀಗೆ ಮಾಡಿ.
1. ಅತಿಯಾಗಿ ಟೀ, ಕಾಫಿ, ಮಾರುಕಟ್ಟೆಯಲ್ಲಿ ಸಿಗುವ ತಂಪುಪಾನೀಯಗಳನ್ನು ಸೇವಿಸಬೇಡಿ.
2. ಮಧ್ಯಪಾನ ಮತ್ತು ಧೂಮಪಾನಗಳೆರಡೂ ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ.
3. ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ.
4. ಅತಿಯಾದ ಉಪ್ಪಿನಂಶವಿರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
5. ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ.
6. ನಿಗದಿತ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವನೆ ಮಾಡಿ.
7. ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ.
8. ಪ್ರತಿದಿನ 3-4 ಲೀಟರ್ ನೀರು ಕುಡಿಯಿರಿ.
9. ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರು ಪದಾರ್ಥಗಳನ್ನು ಸೇವಿಸಿ.
10. ಧಾನ್ಯಗಳು ಹಾಗೂ ಬೇಳೆಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡಿ.