ಬೆಂಗಳೂರು: ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸುವ ಮೊದಲು ತನ್ನೊಂದಿಗೆ ಚರ್ಚೆಗೆ ಕೂರುವಂತೆ ಸಂಸದ ಅನಂತಕುಮಾರ ಹೆಗಡೆಯವರಿಗೆ ಕೂರುವಂತೆ ಶಾಸಕ ಪ್ರದೀಪ್ ಈಶ್ವರ್ ಸವಾಲೆಸೆದರು. ನಗರದಲ್ಲಿ ಮಾತನಾಡಿದ ಅವರು, ಸಭ್ಯತೆ ಮತ್ತು ಸೌಜನ್ಯದ ವಿಷಯದಲ್ಲಿ ಸಾರ್ವಜನಿಕ ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಂಥಾಹ್ವಾನ ನೀಡಿರುವ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ ಹೆಗಡೆಯವರಿಗೆ ಮೊದಲು ತನ್ನೊಂದಿಗೆ ಚರ್ಚೆಗೆ ಕೂರುವಂತೆ ಈಶ್ವರ್ ಹೇಳಿದರು. ಸಂಸದ, ಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ.
ಕಳೆದ ವರ್ಷ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಕೋಲಾಗೆ ಬಂದಾಗ ಹೋಗಿ ಅವರನ್ನು ಸ್ವಾಗತಿಸುವ ಸೌಜನ್ಯತೆ ಅವರಲ್ಲಿರಲಿಲ್ಲ, ಯಾವ ಸೌಜನ್ಯತೆ ಬಗ್ಗೆ ಅವರು ಮಾತಾಡುತ್ತಾರೆ? ಮೊದಲು ಅವರು ತನ್ನೊಂದಿಗೆ ಚರ್ಚೆ ನಡೆಸಲಿ, ಗೆದ್ದರೆ ತಾನೇ ಖುದ್ದಾಗಿ ಅವರನ್ನು ಸಿದ್ದರಾಮಯ್ಯರಲ್ಲಿಗೆ ಕರೆದೊಯ್ಯುವುದಾಗಿ ಈಶ್ವರ್ ಹೇಳಿದರು. ಕಾಂಗ್ರೆಸ್ ನಾಯಕರು ಹೆಗಡೆಯವರಿಗೆ ಗೌರವದಿಂದ ಮಾತಾಡುವ ಅರ್ಥ ಅವರು ಅದಕ್ಕೆ ಅರ್ಹರು ಅಂತಲ್ಲ ತಾವು ಬೆಳೆದ ಸಂಸ್ಕೃತಿ ಹಾಗಿದೆ ಅಂತ ಶಾಸಕ ಹೇಳಿದರು.