ಕಂಬಳಿಹುಳು ಶಿಲೀಂಧ್ರ ಸಂಗ್ರಹಣೆಗೆ ಹೋಗಿದ್ದ ಮೂವರು ಹಿಮಪಾತಕ್ಕೆ ಸಿಲುಕಿ ಸಾವು

ಠ್ಮಂಡು: ನೇಪಾಳದ ಕರ್ನಾಲಿ ಪ್ರಾಂತ್ಯದಲ್ಲಿ ಸಂಭವಿಸಿದ ಹಿಮಪಾತದಿಂದ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.

ಪ್ರಾಂತ್ಯದ ಮುಗು ಜಿಲ್ಲೆಯ ಚ್ಯಾರ್ಖು ಪಾಸ್‌ನಲ್ಲಿ ಈ ಘಟನೆ ಸಂಭವಿಸಿದೆ.

ಜಿಲ್ಲೆಯ ಪಾತರಸಿ ಪುರಸಭೆಯಿಂದ ಹದಿನಾಲ್ಕು ಜನರು ಯರ್ಶಗುಂಬ (ಕಂಬಳಿಹುಳು ಶಿಲೀಂಧ್ರ) ಸಂಗ್ರಹಿಸಲು ಚ್ಯಾರ್ಖುಗೆ ಹೋಗಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮೇ 18ರ ಮೊದಲು ಸ್ಥಳೀಯ ಅಧಿಕಾರಿಗಳು ಪಿಕ್ಕರ್‌ಗಳಿಗೆ ಅವಕಾಶ ನೀಡದಿದ್ದರೂ ನೂರಾರು ಜನರು ಮುಗು ಜಿಲ್ಲೆಯ ಎತ್ತರದ ಪ್ರದೇಶಗಳಿಗೆ ಕಂಬಳಿಹುಳು ಶಿಲೀಂಧ್ರವನ್ನು ಸಂಗ್ರಹಿಸಲು ಪ್ರಯಾಣಿಸಿದ್ದಾರೆ. ಹಿಮಪಾತದಲ್ಲಿ ಸಾವನ್ನಪ್ಪಿದ ಮೂವರು ಅಡ್ಡ ದಾರಿ ಮಾರ್ಗಗಳನ್ನು ಬಳಸಿಕೊಂಡು ಎತ್ತರದ ಪ್ರದೇಶಗಳಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಇದುವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದು ಶೋಧ ಕಾರ್ಯವನ್ನು ಮುಂದುವರೆದಿದೆ.

Loading

Leave a Reply

Your email address will not be published. Required fields are marked *