ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೈಲಿನಿಂದಲೇ ಯುವತಿಯ ನಗ್ನ ಫೋಟೊ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಹೌದು ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಬ್ಯ್ಲಾಕ್ ಮೇಲ್ ಮಾಡಿದ ಆರೋಪಿಯಾಗಿದ್ದು, ರೌಡಿಶೀಟರ್ ಮನೋಜ್ ಕಳೆದ ವರ್ಷ ಅಗಸ್ಟ್ನಲ್ಲಿ ಯುವತಿಯ ತಾಯಿಗೆ ಕರೆ ಮಾಡಿ, ನಿನ್ನ ಮಗಳ ಬೆತ್ತಲೆ ಫೋಟೋವನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಅಂತ ಬೆದರಿಕೆ ಹಾಕಿದ್ದನು. ಇದರಿಂದ ಬೆದರಿದ ಯುವತಿಯ ತಾಯಿ, ರೌಡಿಶೀಟರ್ ಮನೋಜ್ಗೆ 40 ಸಾವಿರ ಹಣ ನೀಡಿದ್ದರು.
ನಂತರ ಫೆಬ್ರವರಿ 9 ರಂದು ಮನೋಜ್ ಸಹಚರ ಕಾರ್ತಿಕ್ ಯುವತಿಯ ತಾಯಿಗೆ ವಾಟ್ಸಪ್ ಮೂಲಕ ಕರೆ ಮಾಡಿ, ನಾನು ಮನೋಜ್ ಕಡೆಯ ಹುಡುಗ. ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮಗಳ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಸುತ್ತೇನೆ ಅಂತ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಇದಾದ ಬಳಿಕ ಫೆಬ್ರವರಿ 12 ರಂದು ಮನೋಜ್ ಜೈಲಿನಿಂದಲೇ ಯುವತಿಯ ತಾಯಿಗೆ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ ಮಾಡಿ, ಹಣ ನೀಡದಿದ್ದರೆ ನಿನ್ನ ಮಗಳ ನಗ್ನ ಫೋಟೋ ರಿವೀಲ್ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.
ಇದರಿಂದ ರೋಸಿಹೋದ ಸಂತ್ರಸ್ತರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ 67, ಐಪಿಸಿ 34 ಅಂಡ್ 384 ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಮನೋಜ್ನನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.