ಇದು ರಷ್ಯಾಕ್ಕೆ ಮಾಡಿದ ದೇಶದ್ರೋಹ : ವ್ಲಾಡಿಮಿರ್ ಪುಟಿನ್ ಆಕ್ರೋಶ

ವ್ಯಾಗ್ನರ್ ಗ್ರೂಪ್ ಸೈನಿಕರು ಮತ್ತು ರಷ್ಯಾ ಮಿಲಿಟರಿಯ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದವರನ್ನು ‘ದೇಶದ್ರೋಹಿಗಳು’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರೋಶ ಹೊರ ಹಾಕಿದ್ದಾರೆ.

ವ್ಯಾಗ್ನರ್ ಸೇನೆ ಬಂಡಾಯ ‘ಬೆನ್ನಿಗೆ ಇರಿತ’ ಎಂದು ಹೇಳಿದ ಪುಟಿನ್, ದೇಶದ್ರೋಹ ಮಾಡುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಎದುರಿಸುತ್ತಿರುವುದು ನಿಖರವಾಗಿ ವಿಶ್ವಾಸದ್ರೋಹ. ಅತಿಯಾದ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು, ದೇಶದ್ರೋಹಕ್ಕೆ ಕಾರಣವಾಗುತ್ತದೆ. ವ್ಯಾಗ್ನರ್ ಹೋರಾಟಗಾರರು ಮತ್ತು ಕಮಾಂಡರ್‌ಗಳು ನಮ್ಮ ಇತರ ಘಟಕಗಳು ಮತ್ತು ವಿಭಾಗಗಳೊಂದಿಗೆ ಹೋರಾಡಿ ಸಾಯುತ್ತಾರೆ ಎಂದು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತ ಪುಟಿನ್ ಹೇಳಿದ್ದಾರೆ.

ಮಿಲಿಟರಿ ದಂಗೆಯನ್ನು ಸಂಘಟಿಸಿದವರು, ತಮ್ಮ ಒಡನಾಡಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡವರು, ರಷ್ಯಾಕ್ಕೆ ದ್ರೋಹ ಬಗೆದವರು ಅದಕ್ಕೆ ಉತ್ತರಿಸಬೇಕು. ಇದು ರಷ್ಯಾಕ್ಕೆ, ನಮ್ಮ ಜನರಿಗೆ ನೀಡಿತ ಹೊಡೆತವಾಗಿದೆ. ಅಂತಹ ಬೆದರಿಕೆಯಿಂದ ಫಾದರ್​​​ಲ್ಯಾಂಡ್​​ನ್ನು ರಕ್ಷಿಸಲು ನಮ್ಮ ಕ್ರಮಗಳು ಕಠಿಣವಾಗಿರುತ್ತದೆ ಎಂದು ಪುಟಿನ್ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *