ಇದು ಸಾರಿಗೆ ಸಚಿವರು ನೋಡಲೇ ಬೇಕಾದ ಸುದ್ದಿ..! ಬಿಎಂಟಿಸಿಯಿಂದಲೇ ನಗರದಲ್ಲಿ ಹೆಚ್ಚಾಗ್ತಿದ್ಯಾ ಟ್ರಾಫಿಕ್ ಜಾಮ್..?

ಬೆಂಗಳೂರು:- ಇದು ಸಾರಿಗೆ ಸಚಿವರು ನೋಡಲೇ ಬೇಕಾದ ಸುದ್ದಿ. ಬಿಎಂಟಿಸಿಯಿಂದಲೇ ನಗರದಲ್ಲಿ ಹೆಚ್ಚಾಗ್ತಿದ್ಯಾ ಟ್ರಾಫಿಕ್ ಜಾಮ್.. ಸಂಚಾರದಟ್ಟಣೆ ಬ್ರೇಕ್ ಹಾಕ್ಬೇದವರೇ, ಟ್ರಾಫಿಕ್ ಜಾಮ್ ಗೆ ಕಾರಣರಾಗ್ತಿದ್ದರಾ..? ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು..? ಇವೆಲ್ಲಾ ಸಮಸ್ಯೆಗಳು ಪ್ರಯಾಣಿಕರನ್ನ ಸಾಗಿಸಬೇಕಾಗಿದ್ದ BMTC ಯನ್ನ ಜನರೇ ದೂಡಬೇಕಾದ ಪರಿಸ್ಥಿತಿ.

ನೋ ‘ ರೈಟ್ ರೈಟ್ ‘. ಹೌದು, ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ 4-5 ಬಿಎಂಟಿಸಿ ಬಸ್ ಗಳು ಕೆಟ್ಟು ಹೋಗ್ತಿವೆ. ಮಾರ್ಗ ಮಧ್ಯೆನೇ ಕೆಟ್ಟು ‌ಹೋಗ್ತಿರೋದ್ರಿಂದ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತಿದೆ. ತಿಂಗಳಿಗೆ 120-170 ಬಸ್ ಗಳು ಈ ರೀತಿ ಕೆಟ್ಟು ರಸ್ತೆಯಲ್ಲೆ ನಿಲುಗಡೆ ಮಾಡಲಾಗುತ್ತಿದೆ.

ಮಾರ್ಗ ಮಧ್ಯೆ ಬಸ್ ಕೆಟ್ಟು ನಿಲ್ಲೋದ್ರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ವರ್ಷ ನಡು ರಸ್ತೆಯಲ್ಲಿ ಕೆಟ್ಟು ಹೋದ ವಾಹನಗಳ ಪೈಕಿ ಬಿಎಂಟಿಸಿ ಬಸ್ ಗಳೇ ಮೊದಲ ಸ್ಥಾನ. ಈ ವರ್ಷ ಬರೋಬ್ಬರಿ 1,478 ಬಿಎಂಟಿಸಿ ಬಸ್ ಗಳು ಕೆಟ್ಟು ರಸ್ತೆಯಲ್ಲೇ ನಿಲುಗಡೆ ಆಗುತ್ತಿವೆ.

ಕೆಟ್ಟು ನಿಂತ ವಾಹನಗಳ ಅಂಕಿ ಅಂಶ

  1. ಬಿಎಂಟಿಸಿ 1478 ಬಸ್ ಗಳು
  2. ಕೆ.ಎಸ್.ಆರ್.ಟಿಸಿ 378 ಬಸ್ ಗಳು
  3. ಖಾಸಗಿ ಬಸ್ 327 ಬಸ್
  4. ಹೆವಿ ಗೂಡ್ಸ್ ವಾಹನ 716 ವಾಹನ
  5. ಕಾರು ‌‌‌‌‌‌ 713 ಕಾರು
  6. ಇತರ ವಾಹನ ‌‌‌‌‌ 334 ವಾಹನಗಳು

GFX

ಸಾರಿಗೆ ಸಚಿವರೇ ಗಮನಿಸಿ

ತಿಂಗಳು BMTC KSRTC

ಜನವರಿ 152 35

ಫೆಬ್ರವರಿ 158 39

ಮಾರ್ಚ್ 160 45

ಏಪ್ರಿಲ್ 110 30

ಮೇ 112 35

ಜೂನ್ 130 28

ಜುಲೈ 160 41

ಆಗಸ್ಟ್ 167 48

ಸೆಫ್ಟೆಂಬರ್ 159 39

ಅಕ್ಟೋಬರ್ 170 ‌ ‌‌‌‌‌ ‌ 65

 

Loading

Leave a Reply

Your email address will not be published. Required fields are marked *