Jಸ್ಪಂದನಾ ನಿಧನ ವಿಚಾರ ತುಂಬಾ ನೋವುಂಟು ಮಾಡಿದೆ. ಇವತ್ತು ತುಂಬಾ ನೋವಿನ ದಿನ. ಚಿತ್ರರಂಗ ಕುಟುಂಬದ ಸದಸ್ಯ ರಾಘು, ತುಂಬಾ ಪ್ರೀತಿಯ ಮಗ. ನನ್ನ ಜೀವನದಲ್ಲಿ ತುಂಬಾ ದುಃಖಮಯವಾದ ಘಟನೆ ಇದು. ದಂಪತಿಗಳನ್ನು ಪ್ರತಿಯೊಬ್ಬರು ಹಾಡಿ ಹೊಗಳುತ್ತಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ನಾವು ನೋಡಬಹುದು. ಸಂಸ್ಕಾರ ಸಂಸ್ಕೃತಿ ಇರುವಂತಹ ಕುಟುಂಬ ಅದು. ರಾಘು ಹಾಗೂ ಕುಟುಂಬಕ್ಕೆ ದೇವರು ದಃಖ ಭರಿಸುವ ಶಕ್ತಿ ನೀಡಲಿ ಎಂದು ಸ್ಪಂದನಾ ನೆನೆದು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಕಣ್ಣೀರು ಹಾಕಿದರು.