ನಮ್ಮ ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ: ಪ್ರತಾಪ್ ಸಿಂಹ

ಮೈಸೂರು: ಮಹಿಷಾ ದಸರಾದಂತಹ (Mahisha Dasara) ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು. ಇಲ್ಲದಿದ್ದರೆ ವೀರಪ್ಪನ್ ನಮ್ಮ ದೇವರು. ಮಲೆ ಮಹದೇಶ್ವರ ದೆವ್ವ ಎನ್ನುತ್ತಾರೆ ಎಂದು ಮಹಿಷ ದಸರಾ ಆಚರಿಸುವವರ ವಿರುದ್ಧ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.

ನಗರದಲ್ಲಿ ಚಾಮುಂಡಿ ಬೆಟ್ಟ ಚಲೋ (Chamundi Betta Chalo) ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಷ ದಸರಾದಂಥ ವಿಕೃತಿಗಳನ್ನು ಈಗಲೇ ಸದೆಬಡಿಯಬೇಕು. ಇಲ್ಲದೆ ಇದ್ದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು. ನಮ್ಮ ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ.

ವೀರಪ್ಪನ್ ನಮ್ಮ ಮೂಲ ನಿವಾಸಿ. ಅವನು ಪ್ರಕೃತಿ ರಕ್ಷಕ ಅಂತ ಕಥೆ ಕಟ್ಟಿ ಮಲೆ ಮಹದೇಶ್ವರನನ್ನು ದೆವ್ವ ಮಾಡಿ ಬಿಡುತ್ತಾರೆ ಎಂದು ಟೀಕಿಸಿದರು. ಅ.13 ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಸಲಾಗುವುದು. ಐದು ಸಾವಿರಕ್ಕೂ ಹೆಚ್ಚು ಜನ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಚಾಮುಂಡಿಗೆ ಪೂಜೆ ಮಾಡಿ ಮಹಿಷಾಸುರನ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿ.ಟಿ.ಲಲಿತಾ ನಾಯಕ್ ಅವರ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಹಾಕಿದ್ದ. ಲಲಿತಾ ನಾಯಕ್ ಸಚಿವೆ ಆಗಿದ್ದಾಗ ಆಕೆ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ. ಅಂಬೇಡ್ಕರ್ಗೆ ಅಪಮಾನ ಮಾಡಿದ ವ್ಯಕ್ತಿಯ ತಾಯಿಯನ್ನು ಮಹಿಷ ದಸರಾ ಉದ್ಘಾಟನೆಗೆ ಕೆಲವು ದಲಿತರು ಕರೆದುಕೊಂಡು ಬರುತ್ತಿರುವುದು ಸರಿನಾ? 50 ವರ್ಷದಿಂದ ಯಾವತ್ತೂ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ? ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Loading

Leave a Reply

Your email address will not be published. Required fields are marked *