ಕಾಂಗ್ರೆಸ್’ನವರ ಈ ಗ್ಯಾರಂಟಿಗಳು ದೇಶವನ್ನು ದಿವಾಳಿಯಾಗಿಸಬಹುದು: ಪ್ರಧಾನಿ ಮೋದಿ

ಜೈಪುರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಸಂದರ್ಭ ಕಾಂಗ್ರೆಸ್ (Congress) ಹೊಸ ಗ್ಯಾರಂಟಿ ಸೂತ್ರವನ್ನು (Guarantee Formula) ಹೆಣೆದಿದೆ. ಕಾಂಗ್ರೆಸ್‌ನವರ ಈ ಗ್ಯಾರಂಟಿಗಳು ದೇಶವನ್ನು ದಿವಾಳಿಯಾಗಿಸಬಹುದು (Bankrupt) ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನದ (Rajasthan) ಅಜ್ಮೀರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರಾಜ್ಯ ಚುನಾವಣೆಗಳಿಗಾಗಿ ಗ್ಯಾರಂಟಿ ಸೂತ್ರಗಳನ್ನು ಸೃಷ್ಟಿಸಿದೆ. ಆದರೆ ಅವರು ತಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರಾ? ಕಲ್ಯಾಣಕ್ಕಾಗಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಜನರು ಆಶ್ಚರ್ಯಪಡುತ್ತಿದ್ದಾರೆ. ಆದರೆ ಅವರಿಗೆ ಎಂದಿಗೂ ಹಣದ ಸಮಸ್ಯೆಯೇ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Loading

Leave a Reply

Your email address will not be published. Required fields are marked *