ಬೆಂಗಳೂರು: ಭಾರತ ಎನ್ನುವುದು ಅಸ್ತಿತ್ವ, ಆತ್ಮ ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿದೆ. ವಿಷ್ಣು ಪುರಾಣದಲ್ಲಿ ಭಾರತ ಎಂಬುದರ ಬಗ್ಗೆ ಚರ್ಚೆಯಾಗಿದೆ. ಮಹಾತ್ಮ ಗಾಂಧಿಯವರ ಜೀವನ ಚರಿತ್ರೆಯಲ್ಲೂ ಭಾರತ ಇದೆ. ಹೋರಾಟ ಮಾಡುವವರಿಗೆ ಮಂತ್ರವಾಗಿದ್ದೇ ಭಾರತ ಮಾತಾ ಕೀ ಜೈ. ಇಂಡಿಯಾ ಅನ್ನೋದು ವ್ಯವಹಾರಿಕ ದೃಷ್ಟಿಯಿಂದ ಬಂದಿದೆ ಅಷ್ಟೇ. ಪರಕೀಯರ ಆಕ್ರಮಣವಾದಾಗ ಇಂಡಿಯಾ ಆಗಿದೆ ಅಷ್ಟೇ. ದೇಶದ ಯಾವ ಸಾಹಿತ್ಯದಲ್ಲೂ ಇಂಡಿಯಾ ಅನ್ನೋ ಹೆಸರಿಲ್ಲ. ಕಾಂಗ್ರೆಸ್ಸಿಗರು ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ ಬಂದಿದ್ದಾರೆ. ಬಹುಶಃ ಇದಕ್ಕಾಗಿ ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜಿಸಿದರು.