ರಾಜ್ಯ ಬಜೆಟ್ ಮೈಸೂರು ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ- ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಸಮಾಧಾನ

ಮೈಸೂರು: ರಾಜ್ಯ ಬಜೆಟ್​ನಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರವಾಸೋದ್ಯಮ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2023–24 ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆಗಳು ಇಲ್ಲ. ಜನಸಾಮಾನ್ಯನಿಗೆ ಸೇರಿದಂತೆ ಯಾರಿಗೂ ಹೊರೆಯಾಗದ ನೂತನ ಬಜೆಟ್ ಸ್ವಾಗತಾರ್ಹ. ಆದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಏನೂ ಅನುದಾನ ನೀಡದೆ ಕಡೆಗಣಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

1. ಚಾಮುಂಡಿ ಬೆಟ್ಟ ಆಭಿವೃದ್ದಿ ಪ್ರಾಧಿಕಾರ ಅಂತ ಘೋಷಣೆ ಮಾಡಲಾಗಿದೆ ಹಣ ಮೀಸಲಿಟ್ಟಿಲ್ಲ

2. ಚಿತ್ರನಗರಿ ಇಮ್ಮಾವು ನಲ್ಲೇ ಮಾಡಲಾಗುವುದೆಂದು ಹೇಳಲಾಗಿದೆ ಹಣ ನೀಡಿಲ್ಲ

3. ದಸರಾ ವಸ್ತು ಪ್ರದರ್ಶನ ವನ್ನು ಮೇಲ್ದರ್ಜೆಗೆ ಏರಿಸಲಾವುದೆಂದು ಹೇಳಲಾಗಿದೆ ಹಣ ನೀಡಿಲ್ಲ

4. ಏರ್ ಪೋರ್ಟ್ ರನ್ ವೇ ವಿಸ್ತರಿಸಲಾಗುವುದೆಂದು ಹೇಳಿ ಹಣ ಮೀಸಲಿಟ್ಟಿಲ್ಲ

5. ದಸರಾ ಅಭಿವೃದ್ದಿ ಪ್ರಾದಿಕಾರ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ

6. ಜಿಲ್ಲೆಗಳನ್ನೊಳಗೊಂಡ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಕೋರಲಾಗಿತ್ತು ಅದರ ಪ್ರಸ್ತಾಪವೇ ಇಲ್ಲ

7. ಜೂ ಹಿಂಬಾಗ ಅರ್ಧ ನಿರ್ಮಿಸಿ ನೆನಗುದಿಗೆ ಬಿದ್ದಿರುವ ಅಂತರರಾಷ್ಟ್ರೀಯ ಮಟ್ಟದ ಅಕ್ವೇರಿಯಮ್ ಬಗ್ಗೆ ಮಾಹಿತಿಯೇ ಇಲ್ಲ

8. ಹೋಟೆಲ್ ಉದ್ಯಮಕ್ಕೂ ಯಾವುದೇ ಪ್ರೊತ್ಸಾಹದ ಪ್ರಸ್ತಾಪವೇ ಇಲ್ಲ. ಒಟ್ಟಾರೆಯಾಗಿದೆ ಅಭಿವೃದ್ದಿಗೆ ಆದ್ಯತೆ ಇಲ್ಲವೇ ಇಲ್ಲಂತಾಗಿದೆ. ಯಥಾಸ್ಥಿತಿ ಆಯವ್ಯಯ ಕಾಪಾಡಲಾಗಿದೆ ಎಂದಿದ್ದಾರೆ.

Loading

Leave a Reply

Your email address will not be published. Required fields are marked *