ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಯಂಡ್ ನ್ಯೂರೋ ಸೈನ್ಸಸ್ ಅರ್ಜಿ ಆಹ್ವಾನಿಸಿದೆ. ನ್ಯೂರಾಲಜಿಸ್ಟ್, ಫಿಸಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ ಸೇರಿ ಸುಮಾರು 162 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತರು ಜನವರಿ 25ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹುದ್ದೆವಿವರ
ನರವಿಜ್ಞಾನಿ: ಎಂಬಿಬಿಎಸ್, ಡಿಎಂ, ಎಂಡಿ-33 ಹುದ್ದೆ
ನ್ಯೂರೋ ನರ್ಸ್: ಎಂ.ಎಸ್‌ಸಿ-1 ಹುದ್ದೆ
ನರ್ಸ್: ಬಿ.ಎಸ್ಸಿ-30 ಹುದ್ದೆ
ಕ್ಲಿನಿಕಲ್ ಸೈಕಾಲಜಿಸ್ಟ್: ಎಂ.ಫಿಲ್, ಎಂಎ, ಎಂ.ಎಸ್‌ಸಿ-32 ಹುದ್ದೆ
ವೈದ್ಯಕೀಯ ಸಮಾಜ ಸೇವಕ: ಸ್ನಾತಕೋತ್ತರ ಪದವಿ-1 ಹುದ್ದೆ
ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ: ಪದವಿ-1 ಹುದ್ದೆ
ಫಿಸಿಯೋಥೆರಪಿಸ್ಟ್: ಪದವಿ-32 ಹುದ್ದೆ
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್: ಪದವಿ-32 ಹುದ್ದೆ
ಸಂದರ್ಶನದದಿನಾಂಕ
ನರವಿಜ್ಞಾನಿ: ಜನವರಿ 29
ನ್ಯೂರೋ ನರ್ಸ್: ಜನವರಿ 29
ನರ್ಸ್: ಜನವರಿ 29
ಕ್ಲಿನಿಕಲ್ ಸೈಕಾಲಜಿಸ್ಟ್: ಜನವರಿ 25
ವೈದ್ಯಕೀಯ ಸಮಾಜ ಸೇವಕ: ಜನವರಿ 25
ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ: ಜನವರಿ 25
ಫಿಸಿಯೋಥೆರಪಿಸ್ಟ್: ಜನವರಿ 27
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್: ಜನವರಿ 27
ವೇತನವಿವರ
ನರವಿಜ್ಞಾನಿ: 75,000 ರೂ.-1,50,000 ರೂ.
ನ್ಯೂರೋ ನರ್ಸ್: 40,000 ರೂ.
ನರ್ಸ್: 20,000 ರೂ.
ಕ್ಲಿನಿಕಲ್ ಸೈಕಾಲಜಿಸ್ಟ್: 40,000 ರೂ.
ವೈದ್ಯಕೀಯ ಸಮಾಜ ಸೇವಕ: 40,000 ರೂ.
ಡೇಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ: 20,000 ರೂ.
ಫಿಸಿಯೋಥೆರಪಿಸ್ಟ್: 40,000 ರೂ.
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್: 40,000 ರೂ.
ಅರ್ಜಿವಿಳಾಸ
ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಬೋರ್ಡ್ ರೂಮ್, 4ನೇ ಮಹಡಿ, NBRC ಕಟ್ಟಡ, ನಿಮ್ಹಾನ್ಸ್, ಬೆಂಗಳೂರು ಇಲ್ಲಿಗೆ ತೆರಳಬೇಕು. ಸಂದರ್ಶನ ಬೆಳಗ್ಗೆ 9.30ರಿಂದ ನಡೆಯಲಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪರಿಶೀಲಿಸಿ ಸಂದರ್ಶನಕ್ಕೆ ಹಾಜರಾಗಬೇಕು.