ಒಣ ಕೆಮ್ಮು, ಕಫ ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿ ಇದನ್ನು ನಿವಾರಣೆ ಮಾಡಬಹುದಾಗಿದೆ. ಶುಂಠಿ, ಜೇನುತುಪ್ಪ, ಅರಿಶಿಣ ಆಯುರ್ವೇದ ಔಷಧಿಗುಣಗಳನ್ನು ಹೊಂದಿದೆ.
ಕೆಮ್ಮು ದೀರ್ಘಕಾಲದವರೆಗೆ ಉಳಿದುಕೊಂಡು ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಶೀತ, ಕೆಮ್ಮು ಮತ್ತು ಕಫದ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
* ಬ್ಲ್ಯಾಕ್ ಟೀ, ಶುಂಠಿ ಚಹಾ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು. ಪ್ರತಿನಿತ್ಯ ಆಹಾರದಲ್ಲಿ ಶುಂಠಿಯ ಉಪಯೋಗ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು.
* ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಹಾಗೂ ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
* ಶುಂಠಿ ರಸ ಜೊತೆಯಲ್ಲಿ 1 ಟೇಬಲ್ ಸ್ಪೂನ್ ಜೇನುತುಪ್ಪ ಬೆರೆಸಿ ದಿನಕ್ಕೆ ಒಂದು ಬಾರಿಯಂತೆ ಸೇವಿಸುವುದರಿಂದ ಗಂಟಲಲ್ಲಿ ಕಫ ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ.
* ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
* ಉಪ್ಪು, ಶುಂಠಿ, ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತದಿಂದ ದೂರ ಇರಬಹುದಾಗಿದೆ.
* ಬಿಸಿ ನೀರಿನ ಆವಿಯನ್ನು ತಲೆಮೇಲೆ ಬಟ್ಟೆ ಮುಚ್ಚುಕೊಂಡು ಬಿಸಿ ಬಿಸಿಯಾದ ಆವಿಯನ್ನು ತೆಗೆದುಕೊಳ್ಳಬೇಕು. ಆಗ ಕಫ ಕರಗಿ ನಿರಾಗುತ್ತದೆ. ಸರಾಗವಾಗಿ ಉಸಿರಾಡಬಹುದಾಗಿದೆ.
* ಏಲಕ್ಕಿ, ಶುಂಠಿ ಪುಡಿಯನ್ನು ಒಟ್ಟಿಗೆ ಸೇರೆಸಿ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.
* ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಕಫ ಮತ್ತು ನೆಗಡಿ ಹತ್ತಿರವೂ ಸುಳಿವುದಿಲ್ಲ.
ಕೆಮ್ಮು ಹೆಚ್ಚುದಿನಗಳ ಕಾಲ ಉಳಿದುಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೆಟಿಯಾಗಬೇಕು. ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.