ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ (Income Tax Officer) ವೇಷ ಧರಿಸಿ ಹೈದರಾಬಾದ್ನ (Hyderabad) ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ಗಳನ್ನು (Gold Biscuit) ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರೆಹಮಾನ್ ಗಫೂರ್ ಅಥರ್, ಜಾಕಿರ್ ಗನಿ ಅಥರ್, ಪ್ರವೀಣ್ ಯಾದವ್ ಹಾಗೂ ಆಕಾಶ್ ಅರುಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸೇರಿದಂತೆ 8ರಿಂದ 10 ಜನರಿದ್ದ ತಂಡವು ಮೇ 27ರಂದು ಹೈದರಾಬಾದ್ನ ಮೋಂಡಾ ಮಾರ್ಕೆಟ್ನಲ್ಲಿರುವ ಸಿದ್ದಿವಿನಾಯಕ ಎಂಬ ಅಂಗಡಿಯಿಂದ ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ 60 ಲಕ್ಷ ರೂ. ಮೌಲ್ಯದ 17 ಚಿನ್ನದ ಬಿಸ್ಕತ್ಗಳನ್ನು ಕಳವು ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ 7 ಚಿನ್ನದ ಬಿಸ್ಕತ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ