ಕಾಣೆಯಾಗಿದ್ದ ಮೂವರು ಸಹೋದರಿಯರು ಶವವಾಗಿ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆ..!

ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ. ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ.

ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

Loading

Leave a Reply

Your email address will not be published. Required fields are marked *