ಮೊನ್ನೆಯಷ್ಟೇ ಡಬಲ್ ಸೆಂಚುರಿ ದಾಟಿದ್ದ ಟೊಮೆಟೋ ಬೆಲೆ ಇದೀಗ 300 ರೂ..!

ಮೊನ್ನೆ ಮೊನ್ನೆಯಷ್ಟೇ ಡಬಲ್ ಸೆಂಚುರಿ ದಾಟಿದ್ದ ಟೊಮೆಟೋ ಬೆಲೆ ಇದೀಗ 300ರ ಹತ್ರ ಗಡಿ ದಾಟಿದೆ. ಸದ್ಯಕ್ಕೆ ಈ ಓಟ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಹೋಲ್ಸೇಲ್ ಮಾರುಕಟ್ಟೆ ಪರಿಣಿತರ ಪ್ರಕಾರ ಟೊಮೆಟೋ ಬೆಲೆ ಶೀಘ್ರವೇ ಮುನ್ನೂರರ ಗಡಿಯನ್ನು ದಾಟಲಿದೆ. ಇದಕ್ಕೆ ಮಳೆ, ಟೊಮೆಟೋ ಗುಣಮಟ್ಟ, ಪೂರೈಕೆ ಮತ್ತು ಸಾಗಣೆ ಸಮಸ್ಯೆಗಳು ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆ ಚಾಮರಾಜನಗರದ ಕೆಬ್ಬೆಪುರದಲ್ಲಿ ಮಂಜು ಎನ್ನುವ ರೈತ ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೋ ಗಿಡಗಳನ್ನು ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಹಾಕಿದ್ದಾರೆ.

ಏರಿಕೆ ಹಾದಿಯನ್ನೇ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ದೇಶದ ಕೆಲವು ನಗರಗಳಲ್ಲಿ ಸಬ್ಸಿಡಿ ಬೆಲೆಗೆ ಮೊಬೈಲ್ ವಾಹನಗಳ ಮೂಲಕ ಟೊಮಾಟೊ ಮಾರಾಟ ಮಾಡಲಾಗುತ್ತಿದೆ. ಆದರೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ಪ್ರಕಾರ, ಬುಧವಾರ ಟೊಮಾಟೊ ಚಿಲ್ಲರೆ ಮಾರಾಟ ಬೆಲೆ ಕೆಜಿಗೆ 203 ರೂ. ಆಗಿದೆ. ಇದೇ ವೇಳೆ ಮದರ್ ಡೇರಿಯ ಸಫಲ್ ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 259 ರೂ.ಗೆ ಆಗಿದೆ.

Loading

Leave a Reply

Your email address will not be published. Required fields are marked *