ಬೆಂಗಳೂರಲ್ಲಿ ಮತ್ತೆ ಶುರುವಾದ ಗುಂಡಿ ಅವಾಂತರ: ನಡುರಸ್ತೆಯಲ್ಲಿ ಕುಸಿದ ರಸ್ತೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ಮುಂದುವರೆದಿದೆ. ಅದರ ಭಾಗವಾಗಿ ಬೆಂಗಳೂರಿನ ಗೋವಿಂದರಾಜನಗರಲ್ಲಿ ನಡು ರಸ್ತೆಯಲ್ಲಿಯೇ ರಸ್ತೆ ಕುಸಿದಿದ್ದು, ನಗರದ 3ನೇ ಮುಖ್ಯ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ಗುಂಡಿ ಕುಸಿದಿದೆ.

ಸುಮಾರು 5 ಅಡಿ ಉದ್ದ ಹಾಗೂ 3 ಅಡಿ ಅಗಲ ರಸ್ತೆ ಕುಸಿದಿದ್ದು, ಅದೇ ರಸ್ತೆಯ 100 ಮೀಟರ್ ಅಂತರದಲ್ಲಿ ಮತ್ತೊಂದು ಕಡೆ ಗುಂಡಿ ಬಿದ್ದಿದೆ, ಇನ್ನೂ ಗುಂಡಿ ಬಿದ್ದು 15 ದಿನವಾದ್ರೂ ಇನ್ನೂ ಕೂಡ ಸರಿಪಡಿಸಿಲ್ಲ. ದಿನದದಿಂದ ದಿನಕ್ಕೆ ಗುಂಡಿ ದೊಡ್ಡದು ಆಗ್ತಿದೆ.

ಯಾವುದೇ ಮುಂಜಾಗ್ರತಾ ಕ್ರಮ ಕೂಡ ಕೈಗೊಂಡಿಲ್ಲ. ಇದರಿಂದ ರಾತ್ರಿವೇಳೆ ಗುಂಡಿ ಕಾಣದೆ ವಾಹನ ಸವಾರರು ಬೀಳೋದು ಗ್ಯಾರಂಟಿ. ಚುನಾವಣೆಗೂ ಮುನ್ನ ಈ ರಸ್ತೆಗೆ ಡಾಂಬರ್ ಹಾಕಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಡಾಂಬರ್ ಕಿತ್ತು ಬಂದಿದೆ. ಇದೇ ರಸ್ತೆಯಲ್ಲಿ ನಿತ್ಯ ನೂರಾರು ಜನರ ಓಡಾಡ್ತರೆ.

ಇದೇ ಗುಂಡಿ ಈಗಾಗಲೇ ಸಾಕಷ್ಟು ಜನರು ಬಿದ್ದಿದ್ದಾರೆ. ಏನಾದರೂ ಅನಾಹುತ ಆದರೆ ಮಾತ್ರ ಅಧಿಕಾರಿಗಳು ಬರ್ತಾರೆ. ಇಲ್ಲವಾದರೆ ನಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಾರೆ ಎಂದು ಬಿಬಿಎಂಪಿ‌ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

Loading

Leave a Reply

Your email address will not be published. Required fields are marked *